ಅಶಿಸ್ತಿನ ವರ್ತನೆ: ಜೈಸ್ವಾಲ್ ರನ್ನು ಮೈದಾನದಿಂದ ಹೊರಗೆ ಕಳುಹಿಸಿದ ನಾಯಕ ಅಜಿಂಕ್ಯ ರಹಾನೆ

Update: 2022-09-25 09:42 GMT

ಹೊಸದಿಲ್ಲಿ:  ಪಶ್ಚಿಮ ಹಾಗೂ  ದಕ್ಷಿಣ ವಲಯದ ನಡುವೆ ನಡೆಯುತ್ತಿರುವ  ದುಲೀಪ್ ಟ್ರೋಫಿ ಫೈನಲ್‌ನ ಐದನೇ ದಿನವಾದ ರವಿವಾರ ಮೊದಲ ಸೆಷನ್‌ನಲ್ಲಿ ವಿವಾದವೊಂದು ಭುಗಿಲೆದ್ದಿತು, ಪಶ್ಚಿಮ ವಲಯ ನಾಯಕ ಅಜಿಂಕ್ಯ ರಹಾನೆ (Ajinkya Rahane)ಅಶಿಸ್ತಿನ ಕಾರಣಕ್ಕೆ ತನ್ನ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal)ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದ ಪ್ರಸಂಗ ನಡೆಯಿತು.

ದಕ್ಷಿಣ ವಲಯದ ಬ್ಯಾಟರ್‌ಗಳಿಗೆ ಸ್ಲೆಡ್ಜಿಂಗ್(ಕೀಟಲೆ) ಮಾಡಿರುವುದಕ್ಕೆ  ಜೈಸ್ವಾಲ್‌ಗೆ ಪ್ರತ್ಯೇಕ ಸಂದರ್ಭಗಳಲ್ಲಿ ಅಂಪೈರ್‌ಗಳು ಎಚ್ಚರಿಕೆ ನೀಡಿದ್ದರು. ವಿಶೇಷವಾಗಿ ಟಿ. ರವಿತೇಜ ಅವರು ಒಂದು ಓವರ್‌ನ ನಡುವೆ ಜೈಸ್ವಾಲ್ ಅವರೊಂದಿಗೆ ಮಾತಿನ ಚಕಮಕಿಯನ್ನೂ ನಡೆಸಿದ್ದರು.

ಇನಿಂಗ್ಸ್‌ನ 50 ನೇ ಓವರ್‌ನಲ್ಲಿ ಜೈಸ್ವಾಲ್ ಹಾಗೂ  ರವಿತೇಜ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ರಹಾನೆ ತ್ವರಿತವಾಗಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಅಂಪೈರ್‌ಗಳು ಕೂಡ ಮಧ್ಯಪ್ರವೇಶಿಸಿದರು.

ರಹಾನೆ ಯುವ ಆಟಗಾರ ಜೈಸ್ವಾಲ್ ರನ್ನು ತನ್ನ ಬಳಿ ಕರೆದು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ  ಜೈಸ್ವಾಲ್ ಅವರು  ಸ್ಲೆಡ್ಜಿಂಗ್ ಮುಂದುವರಿಸಿದರು. ಆಗ ಅಂತಿಮವಾಗಿ ಪಶ್ಚಿಮ ವಲಯದ ನಾಯಕ ರಹಾನೆ ಅವರು ಜೈಸ್ವಾಲ್ ರನ್ನು ಮೈದಾನದಿಂದ ದೂರ ಕಳುಹಿಸಿದರು. ನಾಯಕನ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್ ಮೈದಾನದಿಂದ ಹೊರಡುವಾಗಲೂ ಗೊಣಗುತ್ತಲೇ ಇರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News