ಶ್ರೀಕೃಷ್ಣ ಮಠದ ಯಾತ್ರಿಕರ ಶೌಚಾಲಯ ದುಬಾರಿ!
Update: 2022-09-25 13:55 GMT
ಉಡುಪಿ, ಸೆ.25: ಉಡುಪಿ ಶ್ರೀಕೃಷ್ಣ ಮಠದ ಸಮೀಪದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ರುವ ಯಾತ್ರಿಕರ, ಭಕ್ತಾದಿಗಳ ಬಳಕೆಯ ಶೌಚಾಲಯ ಮತ್ತು ಸ್ನಾನ ಗೃಹದಲ್ಲಿ ಅಧಿಕ ಬೆಲೆ ನಿಗದಿ ಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ದೂರದಿಂದ ಶ್ರೀೀಕೃಷ್ಣ ಮಠಕ್ಕೆ ಆಗಮಿಸುವ ಯಾತ್ರಿಕರಿಗೆ ಅಧಿಕ ಬೆಲೆಯ ಬಿಸಿ ತಟ್ಟಿದ್ದು, ದುಬಾರಿ ಬೆಲೆಯಿಂದಾಗಿ ಯಾತ್ರಿಕರು ಸಾರ್ವಜನಿಕ ಸ್ಥಳದಲ್ಲಿ ಮಲ ಮೂತ್ರ ವಿಸರ್ಜಿಸುವುದು ಕಂಡುಬಂದಿದೆ. ಸಂಬಂಧಪಟ್ಟವರು ಶೌಚಾ ಲಯ ಬಳಕೆಯ ದರವನ್ನು ಕಡಿಮೆಗೊಳಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಪಡಿಸಿದ್ದಾರೆ.