ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಝಾದ್

Update: 2022-09-26 09:56 GMT

ಹೊಸದಿಲ್ಲಿ: ಕಳೆದ ತಿಂಗಳಷ್ಟೇ ಕಾಂಗ್ರೆಸ್ ತೊರೆದಿದ್ದ ಹಿರಿಯ ರಾಜಕಾರಣಿ ಗುಲಾಂ ನಬಿ ಆಝಾದ್(Ghulam Nabi Azad) ತಮ್ಮ ಹೊಸ ರಾಜಕೀಯ ಪಕ್ಷದ ಹೆಸರು 'ಡೆಮಾಕ್ರೆಟಿಕ್ ಆಝಾದ್ ಪಾರ್ಟಿ'(Democratic Azad Party) ಎಂದು ಇಂದು ಘೋಷಿಸಿದ್ದಾರೆ.

"ಉರ್ದು ಮತ್ತು ಸಂಸ್ಕೃತದಲ್ಲಿ ಸುಮಾರು 1500 ಹೆಸರುಗಳು ನಮಗೆ ಬಂದಿದ್ದವು. ನಮಗೆ ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರ ಹೆಸರು ಬೇಕಿತ್ತು,'' ಎಂದು ಜಮ್ಮುವಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಆಝಾದ್ ಹೇಳಿದರು.

ತಮ್ಮ ಹೊಸ ಪಕ್ಷದ ಧ್ವಜವನ್ನೂ ಅವರು ಅನಾವರಣಗೊಳಿಸಿದರು. ಈ ಧ್ವಜವು ನೀಲಿ, ಬಿಳಿ ಮತ್ತು ಹಳದಿ ಬಣ್ಣಗಳ ಮಿಶ್ರಣವಾಗಿದೆ.

"ಮಸ್ಟರ್ಡ್ ಬಣ್ಣವು ಕ್ರಿಯಾತ್ಮಕತೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ, ಬಿಳಿ ಬಣ್ಣ ಶಾಂತಿಯ ಸೂಚಕವಾಗಿದ ಹಾಗೂ ನೀಲಿ ಬಣ್ಣವು ಸ್ವಾತಂತ್ರ್ಯ, ಮುಕ್ತ ಅವಕಾಶ ಮತ್ತು ಕಲ್ಪನೆ ಮತ್ತು ಸಾಗರದಾಳದಷ್ಟು ಮತ್ತು ಆಕಾಶದಷ್ಟು ಎತ್ತರದ ಮಿತಿಗಳನ್ನು ಸೂಚಿಸುತ್ತದೆ,'' ಎಂದು ಅವರು ಹೇಳಿದರು.

ಇದನ್ನೂ ಓದಿ: ಲಿಂಗಾನುಪಾತ: ಉತ್ತರಾಖಂಡ ಕನಿಷ್ಠ; ಗರಿಷ್ಠ ಯಾವ ರಾಜ್ಯ ಗೊತ್ತೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News