'ಭಾರತ್ ಜೋಡೋ' ಕುರಿತು ಸುಳ್ಳು ಟ್ವೀಟ್ ಮಾಡಿದ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ವಿರುದ್ಧ ಪೊಲೀಸ್ ದೂರು

Update: 2022-09-26 09:27 GMT
ಜೈರಾಂ ರಮೇಶ್ 

ಹೊಸದಿಲ್ಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ 'ಭಾರತ್ ಜೋಡೋ' ಯಾತ್ರಾ (Bharat Jodo Yatra) ಕುರಿತಂತೆ ನಕಲಿ ಸುದ್ದಿಯನ್ನು ಹರಡಿದ್ದಕ್ಕಾಗಿ ಕಾಂಗ್ರೆಸ್(Congress) ಪಕ್ಷ ಬಿಜೆಪಿ(BJP) ನಾಯಕಿ ಪ್ರೀತಿ ಗಾಂಧಿ (Priti Gandhi) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು ಈಗಾಗಲೇ ಪೊಲೀಸ್ ದೂರು ದಾಖಲಿಸಿದೆ.

ಈ ಕುರಿತು ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಪಕ್ಷದ ಸಂಸದ ಹಿಬಿ ಈಡನ್ ಅವರ ಪೊಲೀಸ್ ದೂರಿನ ಪ್ರತಿ ಶೇರ್ ಮಾಡಿದ್ದಾರೆ.

"ಬಿಜೆಪಿ ನಾಯಕರು ಹಾಗೂ ಅವರ ಭಕ್ತರ ಆನ್‍ಲೈನ್ ದ್ವೇಷದ ಫ್ಯಾಕ್ಟರಿ ಮೂಲಕ ಹರಡಿದ ನಕಲಿ ಮತ್ತು ವಿಭಜನಾತ್ಮಕ ಸುದ್ದಿಗಳ ಕುರಿತು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಅವರು 'ಭಾರತ್ ಜೋಡೋ' ಯಾತ್ರಾದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಎಚ್ಚರ. ಇದನ್ನು ಹೀಗೆಯೇ ಬಿಟ್ಟು ಬಿಡುವುದಿಲ್ಲ, ಸಂಸದ ಒಬ್ಬ ನಿರ್ದಿಷ್ಟ ದ್ವೇಷಕಾರಕ ಭಕ್ತನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ,'' ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

ಪ್ರೀತಿ ಗಾಂಧಿ ಅವರು ಸೆಪ್ಟೆಂಬರ್ 24 ರಂದು ತಮ್ಮ ಟ್ವಿಟರ್ ಹ್ಯಾಂಡಲ್‍ನಲ್ಲಿ ರಾಹುಲ್ ಗಾಂಧಿಯ ಫೋಟೋ ಶೇರ್ ಮಾಡಿ "ಎಚ್ಚರಿಕೆಯಿಂದ ನೋಡಿ, ಭಾರತ್ ಜೋಡೋ ಅಲ್ಲ, ಇದು ಭಾರತ್ ತೋಡೋ,''ಎಂದು ಬರೆದಿರುವುದನ್ನು ತಮ್ಮ ದೂರಿನಲ್ಲಿ ಈಡನ್ ಉಲ್ಲೇಖಿಸಿದ್ದಾರೆ.

"ರಾಹುಲ್ ಗಾಂಧಿ ಅವರು ಈ ಹಿಂದೆ ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ ಆರೋಪಿ ಜೊತೆ ಫೋಟೋಗೆ ಪೋಸ್ ನೀಡಿದ್ದರೆಂಬ ಭಾವನೆ ಮೂಡಿಸಲಾಗಿದೆ, ಫೋಟೋಗಳಲ್ಲಿರುವ ಜನರು ಬೇರೆ ಬೇರೆ,''ಎಂದು ಈಡನ್ ಬರೆದಿದ್ದಾರಲ್ಲದೆ ಪ್ರೀತಿ ಗಾಂಧಿ ನಂತರ ತಮ್ಮ ಟ್ವೀಟ್ ಡಿಲೀಟ್ ಮಾಡಿ ಇನ್ನೊಂದು ಟ್ವೀಟ್ ಪೋಸ್ಟ್ ಮಾಡಿ ನಿಂದಿಸುವ ಯತ್ನ ನಡೆಸಿದ್ದಾರೆ,'' ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಝಾದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News