ಜಪಾನ್ ಮಾಜಿ ಪ್ರಧಾನಿ ಶಿಂಝೊ ಅಬೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

Update: 2022-09-27 06:20 GMT
photo : ANI

ಟೋಕಿಯೊ: ಪ್ರಧಾನಿ ನರೇಂದ್ರ ಮೋದಿ Prime Minister Narendra Modi ಅವರು ಮಂಗಳವಾರ ಇಲ್ಲಿ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಭೇಟಿ ಮಾಡಿದರು. ಮಾಜಿ ಪ್ರಧಾನಿ ಶಿಂಝೊ  ಅಬೆ ಅವರ ಹಠಾತ್ ನಿಧನದ sudden demise of former prime minister Shinzo Abe ಬಗ್ಗೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು. ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಜಪಾನ್ ನಾಯಕರ ಕೊಡುಗೆ, ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶದ ಕುರಿತ ದೂರದೃಷ್ಟಿಯನ್ನು ಒತ್ತಿ ಹೇಳಿದರು.

ಶಿಂಝೊ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಪಾನ್  ಗೆ ಬಂದಿರುವ ಪ್ರಧಾನಿ ಮೋದಿ, ಸಮಾರಂಭಕ್ಕೆ ಮೊದಲು ಫ್ಯೂಮಿಯೊ ಕಿಶಿದಾ ಅವರನ್ನು ಭೇಟಿಯಾದರು. ಉಭಯ ನಾಯಕರು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

"ಮಾಜಿ ಪ್ರಧಾನಿ ಅಬೆ ಅವರ ಹಠಾತ್ ಸಾವಿನ ಬಗ್ಗೆ ನಾನು ತುಂಬಾ ದುಃಖಿತನಾಗಿದ್ದೇನೆ... ಅವರು ಜಪಾನ್-ಭಾರತದ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು ಹಾಗೂ  ಅದನ್ನು ಹಲವು ಕ್ಷೇತ್ರಗಳಲ್ಲಿ ವಿಸ್ತರಿಸಿದರು" ಎಂದು ದಿವಂಗತ ಜಪಾನ್ ನಾಯಕ ಅಬೆ ಅವರೊಂದಿಗಿನ  ನಿಕಟ ಸ್ನೇಹವನ್ನು ಪ್ರಧಾನಿ ಮೋದಿ ಹಂಚಿಕೊಂಡರು.

ಕಳೆದ ಬಾರಿ ಜಪಾನ್‌ಗೆ ಭೇಟಿ ನೀಡಿದಾಗ ಅಬೆ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು.

67 ವರ್ಷದ ಶಿಂಝೊ ಅಬೆ ಅವರು ಜುಲೈ 8 ರಂದು ದಕ್ಷಿಣ ಜಪಾನಿನ ನಾರಾ ನಗರದಲ್ಲಿ ಪ್ರಚಾರ ಭಾಷಣ ಮಾಡುವಾಗ ಗುಂಡಿಕ್ಕಿ ಕೊಲ್ಲಲ್ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News