ಆರ್ಥಿಕ ಕುಸಿತದತ್ತ ಸಾಗುತ್ತಿರುವ ಜಗತ್ತು: ಡಬ್ಲ್ಯುಟಿಒ ಮುಖ್ಯಸ್ಥೆ

Update: 2022-09-27 17:19 GMT
PHOTO : NDTV 

ಜಿನೇವಾ (ಸ್ವಿಟ್ಸರ್‌ಲ್ಯಾಂಡ್), ಸೆ. 27: ಹಲವಾರು ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಜಗತ್ತು ಆರ್ಥಿಕ ಕುಸಿತದತ್ತ ಸಾಗುತ್ತಿದೆ ಎಂದು ನನಗನಿಸುತ್ತದೆ ಎಂದು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ಮಹಾನಿರ್ದೇಶಕಿ ನಗೋಝಿ ಒಕೊಂಜೊ-ಇವೀಲಾ ಮಂಗಳವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಆರ್ಥಿಕ ಬೆಳವಣಿಗೆಗೆ ಪುನಶ್ಚೇತನ ನೀಡಲು ಕ್ರಾಂತಿಕಾರಿ ನೀತಿಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಯುದ್ಧ, ಹವಾಮಾನ ಬಿಕ್ಕಟ್ಟು, ಆಹಾರ ಬೆಲೆ ಹೆಚ್ಚಳ ಮತ್ತು ನಶಿಸುತ್ತಿರುವ ಇಂಧನ ಮೂಲಗಳು ಹಾಗೂ ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳು ಜಾಗತಿಕ ಆರ್ಥಿಕ ಕುಸಿತಕ್ಕೆ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

‘‘ಧಾವಿಸುತ್ತಿರುವ ಆರ್ಥಿಕ ಕುಸಿತವನ್ನು ಎದುರಿಸಲು ನಾವು ಸಿದ್ಧತೆಗಳನ್ನು ಮಾಡಬೇಕಾಗಿದೆ’’ ಜಿನೇವಾದಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆಯ ವಾರ್ಷಿಕ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News