ರಶ್ಯದ ಪರಮಾಣು ಬೆದರಿಕೆ ಖಂಡಿತ ಹುಸಿಯಲ್ಲ: ಮಾಜಿ ಅಧ್ಯಕ್ಷ ಎಚ್ಚರಿಕೆ

Update: 2022-09-27 17:51 GMT

ಮಾಸ್ಕೋ (ರಶ್ಯ), ಸೆ. 27: ರಶ್ಯದ ವಿರುದ್ಧದ ಆಕ್ರಮಣಗಳು ಮಿತಿ ಮೀರಿದರೆ ಪರಮಾಣು ಅಸ್ತ್ರಗಳನ್ನು ಬಳಸಿಯಾದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಅದಕ್ಕಿದೆ ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮಂಗಳವಾರ ಹೇಳಿದ್ದಾರೆ ಹಾಗೂ ‘‘ಇದು ಖಂಡಿತವಾಗಿಯೂ ಹುಸಿ ಬೆದರಿಕೆಯಲ್ಲ’’ ಎಂದಿದ್ದಾರೆ.

ಹೆಚ್ಚಿನ ಸಮಾಲೋಚನೆಯಿಲ್ಲದೆಯೇ ಪ್ರತಿಕ್ರಿಯಿಸುವ ಹಕ್ಕನ್ನು ರಶ್ಯ ಹೊಂದಿದೆ ಎಂದು ರಶ್ಯದ ಭದ್ರತಾ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಮೆಡ್ವೆಡೆವ್ ಹೇಳಿದರು.

ರಶ್ಯ ಅತಿಕ್ರಮಿಸಿಕೊಂಡಿರುವ ಉಕ್ರೇನ್ ಭೂಭಾಗದ ಹೆಚ್ಚಿನ ಪ್ರದೇಶಗಳಲ್ಲಿ ಜನಮತಗಣನೆ ನಡೆಸುವ ರಶ್ಯದ ನಿರ್ಧಾರದ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿರುವಂತೆಯೇ ಮೆಡ್ವೆಡೆವ್ ಈ ಎಚ್ಚರಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News