ಪಿಎಫ್ ಐ ಮಾತ್ರವೇಕೆ, ಆರೆಸ್ಸೆಸ್ ಅನ್ನು ಕೂಡ ನಿಷೇಧಿಸಬೇಕು: ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್

Update: 2022-09-28 07:17 GMT
Photo:ANI

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಷೇಧದ  PFI ban ಕ್ರಮವನ್ನು ಪ್ರತಿ ರಾಜ್ಯಗಳ ಬಿಜೆಪಿ ನಾಯಕರು ಸ್ವಾಗತಿಸುತ್ತಿದ್ದರೆ, ಕಾಂಗ್ರೆಸ್ ಸಂಸದ ಹಾಗೂ  ಲೋಕಸಭೆಯ ಮುಖ್ಯ ಸಚೇತಕ ಕೋಡಿಕುನ್ನಿಲ್ ಸುರೇಶ್ Congress MP and Lok Sabha Chief Whip, Kodikunnil Suresh ಅವರು ಪಿಎಫ್‌ಐ ಹಾಗೂ ಆರೆಸ್ಸೆಸ್  ಎರಡೂ ಒಂದೇ.  ಆದ್ದರಿಂದ ಸರಕಾರ ಎರಡನ್ನೂ ನಿಷೇಧಿಸಬೇಕು. ಪಿಎಫ್ ಐ ಮಾತ್ರ ಏಕೆ ನಿಷೇಧಿಸಲಾಗಿದೆ? ಎಂದು ಪ್ರಶ್ನಿಸಿದರು.

"ನಾವು ಆರೆಸ್ಸೆಸ್  ಅನ್ನು ಸಹ ನಿಷೇಧಿಸಬೇಕೆಂದು ಒತ್ತಾಯಿಸುತ್ತೇವೆ. ಕೇವಲ ಪಿಎಫ್‌ಐ ನಿಷೇಧಿಸುವುದೊಂದೇ  ಪರಿಹಾರವಲ್ಲ. ಆರೆಸ್ಸೆಸ್ ಕೂಡ ದೇಶದಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆರೆಸ್ಸೆಸ್ ಹಾಗೂ  ಪಿಎಫ್‌ಐ ಎರಡೂ ಸಮಾನವಾಗಿವೆ.  ಆದ್ದರಿಂದ ಸರಕಾರ ಎರಡನ್ನೂ ನಿಷೇಧಿಸಬೇಕು. ಪಿಎಫ್‌ಐ ಮಾತ್ರ ಏಕೆ ನಿಷೇಧಿಸಲಾಗಿದೆ?"  ಎಂದು ಕಾಂಗ್ರೆಸ್ ಮುಖಂಡ ಸುರೇಶ್ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯ (MHA)  ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಪಿಎಫ್ ಐ ಹಾಗೂ ಅದರ ಅಂಗಸಂಸ್ಥೆಗಳನ್ನು 5 ವರ್ಷಗಳ ಅವಧಿಗೆ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News