ಕುಂಬಳೆ | ಪ್ಲಸ್ ವನ್ ವಿದ್ಯಾರ್ಥಿಗೆ ರ‍್ಯಾಗಿಂಗ್‌

Update: 2022-09-29 05:46 GMT

ಕಾಸರಗೋಡು, ಸೆ.29: ಪ್ಲಸ್ ವನ್ ವಿದ್ಯಾರ್ಥಿಯೋರ್ವನಿಗೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್‌(Ragging) ಮಾಡಿರುವ ಘಟನೆ ಅಂಗಡಿ ಮೊಗರು ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ.

ಬುಧವಾರ ಸಂಜೆ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಸೀನಿಯರ್ ವಿದ್ಯಾರ್ಥಿಗಳು ಪ್ಲಸ್ ವನ್ ವಿದ್ಯಾರ್ಥಿಯೋರ್ವನನ್ನು ದಿಗ್ಬಂಧನದಲ್ಲಿರಿಸಿ ರ‍್ಯಾಗಿಂಗ್‌ ನಡೆಸಿದ್ದಾರೆನ್ನಲಾಗಿದೆ. ಇದಲ್ಲದೆ  ವಿದ್ಯಾರ್ಥಿಗಳು ಬೆದರಿಸಿ ಹಲ್ಲೆ ನಡೆಸಿರುವುದಾಗಿ ಕುಂಬಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ರೈಲು ಅಪಘಾತ: ವಿಟ್ಲದ ಯುವಕ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News