ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವ್ಯಸಸ್ಥೆ

Update: 2022-09-29 14:48 GMT

ಮಂಗಳೂರು, ಸೆ.29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆನ್‌ಲೈನ್ ಮೂಲಕ ಬಸ್ ಪಾಸುಗಳನ್ನು ಉಚಿತವಾಗಿ ನೀಡುತ್ತಿದೆ.

ಯಾವುದೇ ಜಿಲ್ಲೆಯಲ್ಲಿ ನೋಂದಾಯಿತರಾಗಿರುವ ರಾಜ್ಯದ ಕಾರ್ಮಿಕರು ಅವರು ಇಚ್ಛಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ 7 ಹಂತಗಳವರೆಗೆ ಅಂದರೆ ಗರಿಷ್ಟ 45 ಕಿ.ಮೀ ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿದೆ.

ಈ ಪಾಸುದಾರರು ಕ.ರಾ.ರ.ಸಾ ನಿಗಮ, ವಾ.ಕ.ರ.ಸಾ ಸಂಸ್ಥೆ, ಕ.ಕ.ರ.ಸಾ ನಿಗಮಗಳ ನಗರ, ಸಾಮಾನ್ಯ ಮತ್ತು ಹೊರವಲಯ ಹಾಗೂ ವೇಗದೂತ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶರುತ್ತದೆ.

ಇ.ಡಿ.ಸಿ.ಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್‌ನಲ್ಲಿ ಕರ್ನಾಟಕ ಒನ್, ಗ್ರಾಮ ಸೇವಾ ಒನ್ ಸೆಂಟರ್‌ಗಳ ಮೂಲಕ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರು ಈ ಸೇವೆ ಪಡೆಯಬಹುದು ಎಂದು ಮಂಗಳೂರು ಕ.ರಾ.ರ.ಸಾ.ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News