ಉಡುಪಿ: ನಿಷೇಧಿತ ಸಂಘಟನೆ ಪಿಎಫ್‌ಐಯ ಕಚೇರಿಗಳಿಗೆ ಬೀಗ

Update: 2022-09-29 15:06 GMT

ಉಡುಪಿ, ಸೆ.29: ನಿಷೇಧಿತ ಸಂಘಟನೆ ಪಿಎಫ್‌ಐ ಕಚೇರಿಗಳಿಗೆ ಸೆ.28ರಂದು ತಡರಾತ್ರಿ ದಾಳಿ ನಡೆಸಿದ ಪೊಲೀಸರು, ಹಲವು ಕಚೇರಿಗಳನ್ನು ಸೀಜ್ ಮಾಡಿ ಬೀಗ ಜಡಿದಿರುವ ಬಗ್ಗೆ ವರದಿಯಾಗಿದೆ. 

ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಕುಂದಾಪುರ ಎಸಿ ರಾಜು ಸಮ್ಮುಖ ದಲ್ಲಿ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ನೇತೃತ್ವದಲ್ಲಿ ಪೊಲೀಸರು, ಪಿಎಫ್‌ಐ ಕಚೇರಿ ಹೊಂದಿರುವ ನಗರದ ಶಂಕರ್ ಬಿಲ್ಡಿಂಗ್, ಮಸೀದಿ ವಾಣಿಜ್ಯ ಸಂಕೀರ್ಣ, ಪಂದುಬೆಟ್ಟು ಕಚೇರಿ,  ಹೂಡೆ, ಗಂಗೊಳ್ಳಿ ಸೇರಿದಂತೆ ಒಟ್ಟು 9 ಕಡೆಗಳಿಗೆ ದಾಳಿ ನಡೆಸಿ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸ್‌ಡಿಪಿಐ ಪಕ್ಷವನ್ನು ಗುರಿಯಾಗಿರಿಸಿ ಯಾವುದೇ ಕಚೇರಿಗೆ ದಾಳಿ ನಡೆಸಿಲ್ಲ. ಅದೇ ರೀತಿ ಮುಖಂಡರ ಮನೆಗಳನ್ನು ಕೂಡ ಸೀಝ್ ಮಾಡಿಲ್ಲ. ನಾಳೆ ಕೂಡ ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕೃತ ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News