ಇಲೆಕ್ಟ್ರಿಕ್ ಪ್ರಯಾಣಿಕ ವಿಮಾನದ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Update: 2022-09-29 18:29 GMT
IMAGE: TWITTER@EviationAero

ವಾಷಿಂಗ್ಟನ್, ಸೆ.29: ಇಂಗಾಲದ ಮಾಲಿನ್ಯ ಮುಕ್ತ ವಾಯುಯಾನದೆಡೆಗಿನ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲುಗಲ್ಲನ್ನು ಸಾಧಿಸಲಾಗಿದ್ದು ಅಮೆರಿಕದ ನವೋದ್ಯಮ ಸಂಸ್ಥೆಯೊಂದು ಸಂಪೂರ್ಣವಾಗಿ ವಿದ್ಯುತ್ನಿಂದ ಚಲಿಸುವ ಪ್ರಯಾಣಿಕರ ವಿಮಾನದ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಆಲಿಸ್ ಎಂಬ ಹೆಸರಿನ ಈ ಇಲೆಕ್ಟ್ರಿಕ್ ವಿಮಾನದಲ್ಲಿ 9 ಪ್ರಯಾಣಿಕರು, ಒಂದು ಅಥವಾ 2 ಪೈಲಟ್‌ಗಳು ಪ್ರಯಾಣಿಸಬಹುದು. ಗಂಟೆಗೆ 240ರಿಂದ 400 ಕಿ.ಮೀ ವೇಗದಲ್ಲಿ ಇದು ಚಲಿಸಬಹುದು. ಮಂಗಳವಾರ ನಡೆದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಈ ವಿಮಾನ 3,500 ಅಡಿ ಎತ್ತರಕ್ಕೆ ಏರಿ 8 ನಿಮಿಷದ ಪ್ರಯಾಣದ ಬಳಿಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ ಎಂದು ‘ಸಿಯಾಟಲ್ ಟೈಮ್ಸ್’ ವರದಿ ಮಾಡಿದೆ. ಇಂದು ನಾವು ವಾಯುಯಾನದ ಮುಂದಿನ ಯುಗಕ್ಕೆ ಕಾಲಿರಿಸಿದ್ದೇವೆ ಎಂದು ವಿಮಾನಯಾನ ಮುಖ್ಯಸ್ಥ ಗ್ರೆಗೊರಿ ಡೇವಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News