ಅ.2ರಂದು ಮಾಹೆ ಗಾಂಧಿ ಸೆಂಟರ್‌ನಲ್ಲಿ ‘ಮಹಾತ್ಮಗಾಂಧಿ’ ಕುರಿತ ತೊಗಲು ಗೊಂಬೆಯಾಟ ನಾಟಕ ಪ್ರದರ್ಶನ
ಉಡುಪಿ, ಅ.1: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್, ಮಣಿಪಾಲದ ತಪೋವನದ ಸಹಯೋಗದಲ್ಲಿ ಧಾರವಾಡದ ಗೊಂಬೆ ಮನೆ ತಂಡದ ‘ಮಹಾತ್ಮಗಾಂಧಿ’ ಕುರಿತು ತೊಗಲು ಗೊಂಬೆ ನಾಟಕ ಪ್ರದರ್ಶನವನ್ನು ಅ.2ರ ರವಿವಾರ ಗಾಂಧಿ ಜಯಂತಿ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಿದ್ದಾರೆ.
ಮಣಿಪಾಲ ಗ್ರೀನ್ಸ್ ಸಮೀಪದ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಬೆಳಗ್ಗೆ 10.15ಕ್ಕೆ ಕಾರ್ಯಕ್ರಮ ನಡೆಯಲಿದೆ. ಮಾಹೆಯ ಗಾಂಧಿ ಜಯಂತಿ ಕಾರ್ಯಕ್ರಮವನ್ನು ವಿವಿಯ ಕುಲಪತಿ ಲೆ.ಜ.(ಡಾ.)ಎಂ.ಡಿ.ವೆಂಕಟೇಶ್ ಉದ್ಘಾಟಿಸ ಲಿದ್ದು, ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸ ಲಿದ್ದಾರೆ. ಮಗಧ ವಿವಿಯ ಪ್ರೊ.ಅಶೋಕ್ ಕುಮಾರ್ ಸಿನ್ಹಾ ಹೇಆಗೂ ಮಣಿಪಾಲ ಮಾಹೆಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷೆ ಡಾ.ಶೋಭಾ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಸಹಿತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಂತಿ, ಪರಿಸರ, ಲಿಂಗತಾರತಮ್ಯ, ಕಲೆ ಕುರಿತು ವಿದ್ಯಾರ್ಥಿ ಗಳಿಂದ ಗಾಂಧಿವಂದನ ಪ್ರಸ್ತುತಿ, ವಿದ್ಯಾರ್ಥಿ ಸಮಿತಿಗಳ ಉದ್ಘಾಟನೆ, ಅಕಾಡೆಮಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯೂ ನಡೆಯಲಿದೆ.
ಕೊನೆಯಲ್ಲಿ ಬೊಳವಾರು ಮಹಮ್ಮದ್ ಕುಂಞ ಇವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಕಾದಂಬರಿ ಯಾಧಾರಿತ ತೊಗಲು ಗೊಂಬೆಯಾಟ ನಡೆಯಲಿದೆ ಎಂದು ಗಾಂಧಿ ಸೆಂಟರ್‌ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.