ಸಹಬಾಳ್ವೆ ಕರ್ನಾಟಕ ಕಾಪು ತಾಲೂಕು ಘಟಕದ ಸಾಮರಸ್ಯದ ನಡಿಗೆ

Update: 2022-10-01 17:21 GMT

ಕಾಪು:  ನಮ್ಮ  ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಹಬಾಳ್ವೆ ಸಾಮರಸ್ಯದ ಎಚ್ಚರ ತನ್ನಿಂದ ತಾನೆ ಜಾಗೃತವಾಗುತ್ತದೆ ಎಂದು ಉಡುಪಿ ತೆಂಕನಿಡಿಯೂರು ಸ್ನಾತಕೊತ್ತರ ಕೇಂದ್ರದ ನಿವೃತ್ತ ಪ್ರಾಂಶುಪಾಲ ಚಿಂತಕ ಗಣನಾಥ ಎಕ್ಕಾರು ಹೇಳಿದರು.

ಸಹಬಾಳ್ವೆ ಕರ್ನಾಟಕ ಕಾಪು ತಾಲೂಕು ಘಟಕದ ವತಿಯಿಂದ ಶನಿವಾರ ಕಾಪುವಿನಲ್ಲಿ ನಡೆದ ಸಾಮರಸ್ಯದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ವಿಷಯ ಮಂಡನೆ ಮಾಡುತ್ತಾ ಮಾತನಾಡಿ. ದೇಶದ ಬಹುತ್ವ  ಉಳಿವು ಹಾಗೂ ಏಕತೆಗಾಗಿ ಮಹಾತ್ಮಾ ಗಾಂದೀಜಿ ಆದಿಯಾಗಿ ಅನೇಕ ಮಹನೀಯರು ಮಹತ್ವದ ಕೊಡುಗೆ ನೀಡಿದ್ದಾರೆ. ಸಾಮರಸ್ಯಕ್ಕೆ ದಕ್ಕೆಯಾದಾಗೆಲ್ಲ ದನಿ ಎತ್ತಿದ್ದಾರೆ. ಆ ಎಚ್ಚರ ನಮ್ಮಲೂ ಹಿಂದೆಂದಿಗಿಂತಲೂ ಅಗತ್ಯವಾಗಿ ಇರಬೇಕಾಗಿದೆ.

ಮುಖ್ಯ ಅತಿಥಿಗಳಾಗಿದ್ದ ಕಾಪು ಗಾಂ ಪ್ರತಿಷ್ಠಾನದ ದೇವದಾಸ ಶೆಟ್ಟಿ, ಉಡುಪಿಯ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಪೊಲಿಪು ಜುಮ್ಮಾ ಮಸೀದಿಯ ಧರ್ಮಗುರು ಮೊಹಮ್ಮದ್ ಇರ್ಷಾದ್ ಸಅದಿ ಮತ್ತು ಕಾಪು ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಮಾತನಾಡಿದರು. 

ಕಾಪು ಜನಾರ್ದನ ದೇವಸ್ಥಾನದ ಬಳಿಯಿಂದ ಕಾಪು ಪೇಟೆಯ ವರೆಗೆ ನಡೆದ ಕಾಲ್ನಡಿಗೆಯನ್ನು ಸಹಬಾಳ್ವೆ ತಾಲೂಕು ಅಧ್ಯಕ್ಷ  ಅಧ್ಯಕ್ಷ ನಿರ್ಮಲ್ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮದ ಸಂಚಾಲಕ ನವೀನ್ ಸುವರ್ಣ ಅಡ್ವೆ ಅವರಿಗೆ ರಾಷ್ಟ್ರಧ್ವಜ ನೀಡುವ ಮೂಲಕ ಉದ್ಘಾಟಿಸಿದರು. ಬಳಿಕ ಕಾಪು ಪೇಟೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.

ಉದ್ಯಮಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಸಹಬಾಳ್ವೆ ಕಾಪು ಘಟಕದ ಗೌರವಾಧ್ಯಕ್ಷ ಲೀಲಾಧರ ಶೆಟ್ಟಿ ಕರಂದಾಡಿ, ಸಹಬಾಳ್ವೆ ಜಿಲ್ಲಾ ಸಂಚಾಲಕ ಪ್ರಶಾಂತ್ ಜತ್ತನ್ನ,  ಪ್ರಮುಖರಾದ ವಿನಯ ಬಲ್ಲಾಳ್, ಯು ಸಿ ಶೇಕಬ್ಬ, ಉದ್ಯಾವರ ನಾಗೇಶ್ ಕುಮಾರ್, ಶಾಂತಲತಾ ಶೆಟ್ಟಿ, ಮಹಮ್ಮದ್ ಸಾದಿಕ್ ದಿನಾರ್, ರಾಜೇಶ್ ಶೆಟ್ಟಿ ಪಾಂಗಾಳ, ಕೆ.ಎಚ್ ಉಸ್ಮಾನ್, ದೀಪಕ್ ಕುಮಾರ್ ಎರ್ಮಾಳ್, ಅನ್ವರ್ ಆಲಿ, ಗಣೇಶ್ ಆಚಾರ್ಯ, ಫರ್ಝಾನ,  ಜ್ಯೋತಿ ಮೆನನ್, ಶೋಭಾ ಬಂಗೇರ, ಸುಗುಣ ಪೂಜಾರಿ, ರಮೀಝ್ ಹುಸೈನ್, ಸರ್ಪುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.‌

ಪುರಸಭೆ ಮಾಜಿ ಸದಸ್ಯೆ ಅಶ್ವಿನಿ ಹಾಗೂ ಪ್ರಧಾನ ಕಾರ್ಯದರ್ಶಿ ರೋಲ್ಪಿ ಡಿ. ಕಾಸ್ತಾ ಸ್ವಾಗತಿಸಿದರು. ಸಹಬಾಳ್ವೆ ತಾಲೂಕು ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ತಸ್ನೀನ್ ಆರ್ಹಾ ವಂದಿಸಿದರು. ರಾಜೇಶ್  ಸೇರಿಗಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News