×
Ad

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಮೇಘಾಲಯ ಬಿಜೆಪಿ ಉಪಾಧ್ಯಕ್ಷನಿಗೆ ಹೈಕೋರ್ಟ್ ಜಾಮೀನು

Update: 2022-10-02 12:11 IST
Photo:twitter

ಹೊಸದಿಲ್ಲಿ: ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ತನ್ನ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯ ಉಪಾಧ್ಯಕ್ಷ ಹಾಗೂ  ತುರಾ ಕೌನ್ಸಿಲರ್ ಬರ್ನಾರ್ಡ್ ಎನ್. ಮಾರಕ್ ಗೆ Bharatiya Janata Party (BJP) state vice president and Tura councillor Bernard N Marak ಮೇಘಾಲಯದ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಶುಕ್ರವಾರ ಬರ್ನಾರ್ಡ್ ಪತ್ನಿ ಎಲ್‌.ಕೆ. ಗ್ರೇಸಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ವಾನ್ಲುರಾ ಡಿಯೆಂಗ್‌ಡೊ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶವನ್ನು ನೀಡಿದೆ. ಶನಿವಾರ ಲಭ್ಯವಾದ ಆದೇಶದ ಪ್ರಕಾರ, ಮಾರಕ್‌ಗೆ ಪರಾರಿಯಾಗದಂತೆ ಅಥವಾ ಸಾಕ್ಷ್ಯವನ್ನು ಹಾಳು ಮಾಡದಂತೆ, ದೇಶದಿಂದ ಹೊರಗೆ ಹೋಗದಂತೆ ಹಾಗೂ  ಅಗತ್ಯವಿದ್ದಾಗ ಮತ್ತು ತನಿಖೆಗೆ ಸಹಕರಿಸುವಂತೆ  ನಿರ್ದೇಶಿಸಲಾಗಿದೆ.

ಜುಲೈ 23 ರಂದು, ವೆಸ್ಟ್ ಗಾರೊ ಹಿಲ್ಸ್ ಪೊಲೀಸರು ಮಾರಕ್ ಒಡೆತನದ ಕಟ್ಟಡದಲ್ಲಿ ನಡೆಸುತ್ತಿದ್ದ ಸೆಕ್ಸ್ ಜಾಲವನ್ನು ಭೇದಿಸಿದ್ದರು. ಈ ವೇಳೆ 75 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು,  ಅಪ್ರಾಪ್ತ ಬಾಲಕಿ ಸೇರಿದಂತೆ ಐದು ಮಕ್ಕಳನ್ನು ರಕ್ಷಿಸಲಾಗಿತ್ತು.

ಜುಲೈ 26 ರಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಿಂದ ತಲೆಮರೆಸಿಕೊಂಡಿದ್ದ ಮಾರಕ್ ನನ್ನು ಬಂಧಿಸಲಾಯಿತು. ಮಾರಕ್ ಒಡೆತನದ ಕಟ್ಟಡದಿಂದ ಮದ್ಯ ಹಾಗೂ  ಬಳಕೆಯಾಗದ ಗರ್ಭನಿರೋಧಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಾರಕ್ ನ ವಿರುದ್ಧ ತುರಾ ಮಹಿಳಾ ಪೊಲೀಸ್ ಠಾಣೆಯಲ್ಲಿ 1956ರ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News