×
Ad

'ಸವುಕ್ಕು ಶಂಕರ್' ಆರೋಗ್ಯ ಸ್ಥಿತಿ ಗಂಭೀರ: ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ವಕೀಲರ ಪತ್ರ

Update: 2022-10-02 16:30 IST
ಯೂಟ್ಯೂಬರ್ 'ಸವುಕ್ಕು' ಶಂಕರ್ (screengrab:YOUTUBE/REDPIX)

ಚೆನ್ನೈ: ಜೈಲಿನಲ್ಲಿರುವ ಖ್ಯಾತ ಯೂಟ್ಯೂಬರ್ 'ಸವುಕ್ಕು' ಶಂಕರ್ ಅವರ ಆರೋಗ್ಯವು ಗಂಭೀರ ಸ್ಥಿತಿಯಲ್ಲಿದೆ ಎಂದು ʼಜೈಲಿನಲ್ಲಿರುವ ಕೈದಿಗಳ ಹಕ್ಕುಗಳ ವೇದಿಕೆʼಯ ಸಂಚಾಲಕ ವಕೀಲ ಪುಗಲೇಂತಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ.

 ಈ ವಿಷಯದಲ್ಲಿ ಸ್ಟಾಲಿನ್ ಅವರ ತಕ್ಷಣದ ಮಧ್ಯಪ್ರವೇಶವನ್ನು ಕೋರಿ, ಶಂಕರ್ ಅವರ ವಕೀಲರೂ ಆಗಿರುವ ಪುಗಲೇಂತಿ ಅವರು ಅಕ್ಟೋಬರ್ 2 ರಂದು ಮುಖ್ಯಮಂತ್ರಿ ಸ್ಟಾಲಿನ್‌ ಗೆ ಪತ್ರ ಬರೆದಿದ್ದಾರೆ.

ಕಾರಾಗೃಹದ ಅಧಿಕಾರಿಗಳು ತಮ್ಮ ಭೇಟಿಯ ಹಕ್ಕನ್ನು ಒಂದು ತಿಂಗಳ ಕಾಲ ರದ್ದುಗೊಳಿಸಿರುವದನ್ನು ವಿರೋಧಿಸಿ ಶಂಕರ್‌ ಅವರು ಸೆಪ್ಟೆಂಬರ್ 30 ರಂದು ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ನ್ಯಾಯಾಂಗದ ವಿರುದ್ಧ ಮಾಡಿದ ಟೀಕೆಗಳಿಗಾಗಿ ನ್ಯಾಯಾಲಯದ ನಿಂದನೆಯ ಆರೋಪದಲ್ಲಿ ಮದ್ರಾಸ್ ಹೈಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿದ ನಂತರ ಯೂಟ್ಯೂಬರ್ ಶಂಕರ್‌ ಅವರನ್ನು  ಆರು ತಿಂಗಳ ಶಿಕ್ಷೆ ವಿಧಿಸಲಾಗಿದೆ.

ಸೆಪ್ಟೆಂಬರ್ 15 ರಂದು, ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ಶಂಕರ್ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆಯಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಶಂಕರ್‌ ತಮ್ಮ  ಯೂಟ್ಯೂಬ್ ಚಾನೆಲ್‌ನಲ್ಲಿ "ಇಡೀ ಉನ್ನತ ನ್ಯಾಯಾಂಗವು ಭ್ರಷ್ಟಾಚಾರದಿಂದ ಕೂಡಿದೆ" ಎಂದು ಹೇಳಿಕೆ ನೀಡಿದ್ದರು. ಅವರನ್ನು ಮೊದಲು ಮಧುರೈ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು, ನಂತರ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕಡಲೂರು ಜೈಲಿಗೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News