ಇಂಜಿನ್ ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: 5 ಗಂಟೆ ತಡವಾಗಿ ಆಗಮಿಸಿದ ಬೆಂಗಳೂರು - ಕಣ್ಣೂರು ರೈಲು

Update: 2022-10-02 15:48 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಅ.2: ಬೆಂಗಳೂರು -ಕಣ್ಣೂರು ರೈಲ್‌ನ ಎಂಜಿನ್‌ನಲ್ಲಿ ತಾಂತ್ರಿಕ ದೋಷದ ಕಾರಣ ಇಂದು ಬೆಳಗ್ಗೆ ಮಂಗಳೂರಿಗೆ ಸುಮಾರು 5 ಗಂಟೆ ತಡವಾಗಿ ತಲುಪಿದ ಪ್ರಸಂಗ ನಡೆದಿದೆ.

ಬೆಂಗಳೂರಿನಿಂದ ಶನಿವಾರ ರಾತ್ರಿ 9.30ಕ್ಕೆ ಹೊರಟ ಬೆಂಗಳೂರು -ಕಣ್ಣೂರು ರೈಲು ಇಂದು ಬೆಳಗ್ಗೆ 7.15ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪ ಬೇಕಿತ್ತು. ಆದರೆ ಬೆಂಗಳೂರಿನಿಂದ ಹೊರಟ ರೈಲು ಸೋಲೂರು ಬಳಿ ತಲುಪಿದಾಗ ರೈಲ್‌ನಲ್ಲಿ ಎಂಜಿನ್ ವೈಫಲ್ಯ ಕಾಣಿಸಿಕೊಂಡಿತು. ಇದರಿಂದಾಗಿ ರೈಲ್‌ನ  ಸಂಚಾರ ಸ್ಥಗಿತಗೊಳಿಸಲಾಯಿತು. ಬಳಿಕ ಯಶವಂತಪುರದಿಂದ  ಬೇರೆ ಎಂಜಿನ್ ತರಿಸಿ  ರೈಲ್‌ಗೆ ಜೋಡಿಸಿ ಸಂಚಾರವನ್ನು ಮರು ಆರಂಭಿಸಲಾಯಿತು. ಇದರಿಂದಾಗಿ ರೈಲಿನ ನಿಗದಿತ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳೂರು ಸೆಂಟ್ರಲ್‌ಗೆ ರವಿವಾರ ಬೆಳಗ್ಗೆ 7.15ಕ್ಕೆ ಬರಬೇಕಾಗಿದ್ದ  ರೈಲು ಮಧ್ಯಾಹ್ನ 12.15ಕ್ಕೆ  ತಲುಪಿದೆ.

ದಸರಾ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಂದ ಆಗಮಿಸುವ ಮಂಗಳೂರು, ಉಡುಪಿ ನಿವಾಸಿಗಳ ಸಹಿತ, ಮಂಗಳೂರು ದಸರಾ ನೋಡಲು ಬರುತಿದ್ದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಪ್ರಯಾಣಿಕರು ರೈಲು ಸಂಚಾರದ ವ್ಯತ್ಯದಿಂದ ಪರದಾಡ ಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News