​ಯುಎಇ ವೀಸಾ ನಿಯಮ ಬದಲಾವಣೆ

Update: 2022-10-02 18:26 GMT

ಅಬುಧಾಬಿ, ಅ.2: ಕಳೆದ ತಿಂಗಳು ಯುಎಇ ಘೋಷಿಸಿದ್ದ ಸುಧಾರಿತ ವೀಸಾ ವ್ಯವಸ್ಥೆ ಅಕ್ಟೋಬರ್ 3ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ
ಯುಎಇ ಸಂಪುಟ ಎಪ್ರಿಲ್ನಲ್ಲಿ ಅನುಮೋದಿಸಿರುವ ಈ ಹೊಸ ವೀಸಾ ನಿಯಮಗಳು ದೇಶದ ವಲಸೆ ಮತ್ತು ರೆಸಿಡೆನ್ಸಿ ನೀತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪ್ರವಾಸಿಗರಿಗೆ ದೀರ್ಘಾವಧಿಯ ವೀಸಾಗಳು, ಗ್ರೀನ್ ವೀಸಾ ಅಡಿಯಲ್ಲಿ ವೃತ್ತಿಪರರಿಗೆ ವಿಸ್ತತ ರೆಸಿಡೆನ್ಸಿ ಮತ್ತು ವಿಸ್ತರಿತ 10 ವರ್ಷದ ಗೋಲ್ಡನ್ ವೀಸಾ ಯೋಜನೆಯಂತಹ ಬದಲಾವಣೆಯನ್ನು ಹೊಂದಿದೆ.
 

ನವೀಕರಿಸಿದ ವೀಸಾ ವ್ಯವಸ್ಥೆಯು ಜೀವನದ ಗುಣಮಟ್ಟವನ್ನು ಸುಧಾರಿಸುವ ಮತ್ತು ಯುಎಇಯಲ್ಲಿ ವಾಸಿಸುವ, ಕೆಲಸ ಮಾಡುವ , ಹೂಡಿಕೆ ಮಾಡುವ ಅನುಭವವನ್ನು ಆಹ್ಲಾದಕರವನ್ನಾಗಿಸುತ್ತದೆ ಎಂದು ರೆಸಿಡೆನ್ಸಿ ಮತ್ತು ವಿದೇಶಿ ವ್ಯವಹಾರ ವಿಭಾಗದ ಪ್ರಧಾನ ನಿರ್ದೇಶಕ ಮೇಜರ್ ಜನರಲ್ ಯೂಸುಫ್ ಅಲ್ ನುವಾಮಿಯವರನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News