ಉಕ್ರೇನ್ ಮೇಲಿನ ರಶ್ಯ ಆಕ್ರಮಣ ಅಂತ್ಯಗೊಳಿಸಲು ಎರಡು ಸಲಹೆ ನೀಡಿ ತರಾಟೆಗೊಳಗಾದ ಎಲಾನ್ ಮಸ್ಕ್

Update: 2022-10-04 05:52 GMT
ಎಲಾನ್ ಮಸ್ಕ್ (File Photo: PTI)

ಕೀವ್: ಉಕ್ರೇನ್(Ukraine) ಜೊತೆಗೆ ರಶ್ಯಾದ(Russia) ಯುದ್ಧವನ್ನು ಕೊನೆಗೊಣಿಸುವ ನಿಟ್ಟಿನಲ್ಲಿ ಒಂದು ಯೋಜನೆಗೆ ಹೆಚ್ಚು ಒತ್ತು ನೀಡಬೇಕೆಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರು ಟ್ವಿಟರಿಗರನ್ನು ಕೇಳಿದ ಬೆನ್ನಿಗೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskiy) ಸಹಿತ ಉಕ್ರೇನಿಗರಿಂದ ವ್ಯಾಪಕ ಟೀಕೆಗೊಳಗಾಗಿದ್ದಾರೆ.

ರೆಫರೆಂಡಂ ಮೂಲಕ ತಾನು ಆಕ್ರಮಿಸಿರುವುದಾಗಿ ರಶ್ಯ ಕಳೆದ ವಾರ ಉಲ್ಲೇಖಿಸಿದ ನಾಲ್ಕು ಪ್ರಾಂತ್ಯಗಳಲ್ಲಿ ವಿಶ್ವ ಸಂಸ್ಥೆ ಮೇಲುಸ್ತುವಾರಿಯಲ್ಲಿ ಚುನಾವಣೆ ನಡೆಸಬೇಕು ಎಂದು ಮಸ್ಕ್ ಸಲಹೆ ನೀಡಿದ್ದರು. ರಶ್ಯಾದ ಕ್ರಮವನ್ನು ಕೀವ್ ಮತ್ತು ಉಕ್ರೇನ್‍ನ ಪಶ್ಚಿಮ ಭಾಗದ ಆಡಳಿತಗಳು ಅಕ್ರಮ ಮತ್ತು ಬಲವಂತದ ಕ್ರಮವೆಂದು ಬಣ್ಣಿಸಿದ್ದವು.

"ಜನರ ಇಚ್ಛೆಯಾಗಿದ್ದರೆ ರಶ್ಯ ಈ ಪ್ರಾಂತ್ಯಗಳಿಂದ ಹೊರಹೋಗಬೇಕು,'' ಎಂದು ಮಸ್ಕ್ ಬರೆದಿದ್ದರು.

ರಶ್ಯ 2014 ರಲ್ಲಿ ವಶಪಡಿಸಿಕೊಂಡ ಕ್ರಿಮಿಯಾವನ್ನು ಅಧಿಕೃತವಾಗಿ ರಶ್ಯಾದ ಭಾಗವಾಗಿ ಘೋಷಿಸಬೇಕು ಹಾಗೂ ಅಲ್ಲಿಗೆ ಜಲಪೂರೈಕೆ ಆಶ್ವಾನಸ ನೀಡಬೇಕು ಹಾಗೂ ಈ ಕುರಿತಂತೆ ಉಕ್ರೇನ್ ತಟಸ್ಥ ನಿಲುವು ಹೊಂದಬೇಕು ಎಂದು ಮಸ್ಕ್ ಸೂಚಿಸಿದರು. ಅವರ ಸಲಹೆಗಳಿಗೆ 'ಹೌದು' ಅಥವಾ 'ಇಲ್ಲ' ಉತ್ತರಗಳನ್ನು ನೀಡುವಂತೆಯೂ ಅವರು ಟ್ವಿಟರಿಗರನ್ನು ಕೇಳಿಕೊಂಡರು.

'ಡೊನ್ಬಾಸ್ ಮತ್ತು ಕ್ರಿಮಿಯಾದ ಜನರು ತಾವು ರಶ್ಯ ಅಥವಾ ಉಕ್ರೇನ್ ಭಾಗವೇ ಎಂಬುದನ್ನು ನಿರ್ಧರಿಸುವಂತಾಗಬೇಕು,'' ಎಂದೂ ಮಸ್ಕ್ ಹೇಳಿದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ. "ಯಾವ ಎಲಾನ್ ಮಸ್ಕ್ ನಿಮಗೆ ಹೆಚ್ಚು ಇಷ್ಟ? ಉಕ್ರೇನ್ ಅನ್ನು ಬೆಂಬಲಿಸುವವರೇ ಅಥವಾ ರಶ್ಯಾವನ್ನು ಬೆಂಬಲಿಸುವವರೇ?'' ಎಂದು ಕೇಳಿದ್ದಾರೆ.

"ಪ್ರೀತಿಯ ಮಸ್ಕ್, ಯಾರಾದರೂ ನಿಮ್ಮ ಟೆಸ್ಲಾದ ಚಕ್ರಗಳನ್ನು ಕದ್ದರೆ ಅವರು ಕಾರಿನ ಕಾನೂನುಬದ್ಧ ಮಾಲಕರಾಗುವುದಿಲ್ಲ,'' ಎಂದು ಲಿಥುವೇನಿಯಾ ಅಧ್ಯಕ್ಷ ಗಿಟಾನಸ್ ನಾಸೇಡ ಬರೆದಿದ್ದಾರೆ.

ಇದನ್ನೂ ಓದಿ: ಉತ್ತರ ಕೊರಿಯಾದಿಂದ ಕ್ಷಿಪಣಿ: ನಿವಾಸಿಗಳನ್ನು ಸ್ಥಳಾಂತರಿಸುವಂತೆ ಜಪಾನ್‌ ಕರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News