ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ನಾಲ್ವರ ಅಪಹರಣ

Update: 2022-10-04 08:08 GMT
Photo: Facebook/MercedSheriffOffice

ಕ್ಯಾಲಿಫೋರ್ನಿಯ: 8 ತಿಂಗಳ ಮಗುವಿನ ಸಹಿತ ಭಾರತ ಮೂಲದ(Indian-Origin) ನಾಲ್ಕು ಮಂದಿಯನ್ನು ಅಪಹರಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ(California) ಮರ್ಸಿಡ್ ಕೌಂಟಿಯಲ್ಲಿ(Merced County ) ಸೋಮವಾರ 8 ತಿಂಗಳ ಹೆಣ್ಣು ಮಗು ಮತ್ತು ಮಗವಿನ ಪೋಷಕರ ಸಹಿತ ನಾಲ್ವರನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ. 

ಜಸ್ದೀಪ್ ಸಿಂಗ್ (36), ಜಸ್ಲೀನ್ ಕೌರ್ (27), ಅವರ ಎಂಟು ತಿಂಗಳ ಮಗು ಅರೂಹಿ ಧೇರಿ, ಅಮನ್‌ದೀಪ್ ಸಿಂಗ್ (39) ಅವರನ್ನು ಅಪಹರಿಲಾಗಿದೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಶಂಕಿತ ಅಪಹರಣಕಾರ ಶಸ್ತ್ರಸಜ್ಜಿತ ಮತ್ತು ಅಪಾಯಕಾರಿ ಎಂದು ಪೊಲೀಸರು ವಿವರಿಸಿದ್ದಾರೆ.

ತನಿಖೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್‌ಗಳಿರುವ ಸ್ಥಳದಿಂದ ನಾಲ್ವರನ್ನು ಅಪಹರಿಸಲಾಗಿದೆ. ಶಂಕಿತ ಮತ್ತು ಅಪಹರಣದ ಉದ್ದೇಶದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಕುಸಿದು ಮೃತಪಟ್ಟ ಖ್ಯಾತ ಗಾಯಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News