ಮೊಬೈಲ್‌ ಫೋನ್, ಟ್ಯಾಬ್ಲೆಟ್, ಕ್ಯಾಮರಾಗಳಿಗೆ ‌ಟೈಪ್‌ ಸಿ ಚಾರ್ಜರ್ ಕಡ್ಡಾಯ: ಯುರೋಪ್‌ ಪಾರ್ಲಿಮೆಂಟ್ ಮಹತ್ವದ ನಿರ್ಧಾರ

Update: 2022-10-04 17:03 GMT
File Photo

ಲಂಡನ್:‌ ಯುರೋಪಿಯನ್ ಪಾರ್ಲಿಮೆಂಟ್ ಮಂಗಳವಾರ ಹೊಸ ನಿಯಮಗಳನ್ನು ಅನುಮೋದಿಸಿದ್ದು, 2024 ರ ವೇಳೆಗೆ ಯುರೋಪಿಯನ್ ಒಕ್ಕೂಟದಲ್ಲಿ ಬಿಡುಗಡೆಯಾಗುವ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕ್ಯಾಮೆರಾಗಳಿಗಾಗಿ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಹೇಳಿದೆ. ಇದು ಐಫೋನ್ ತಯಾರಕ ಆಪಲ್ ಗೆ ತನ್ನ ಪ್ರತಿಸ್ಪರ್ಧಿ ಕಂಪೆನಿಗಳಿಗಿಂತ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

ಎಲ್ಲಾ ಸಾಧನಗಳಿಗೆ ಟೈಪ್‌ ಸಿ ಯಂತಹ ನಿರ್ದಿಷ್ಟ ಮಾದರಿಯ ಚಾರ್ಜಿಂಗ್‌ ಫೆಸಿಲಿಟಿಯನ್ನು ಹೇರುವುದರಿಂದ ಎಲೆಕ್ಟ್ರಾನಿಕ್‌ ತ್ಯಾಜ್ಯದ ರಾಶಿಯೇ ನಿರ್ಮಾಣವಾಗಬಹುದು ಎಂದು ಇದರ ವಿರುದ್ಧ ಈ ಹಿಂದೆಯೇ ಆಪಲ್‌ ಕಂಪೆನಿ ಎಚ್ಚರಿಸಿತ್ತು. ಅಲ್ಲದೆ ಈ ಪ್ರಸ್ತಾಪವು ನಾವೀನ್ಯತೆಗೆ ಹಾನಿ ಮಾಡುತ್ತದೆ ಎಂದೂ ಕಂಪೆನಿ ಹೇಳಿಕೊಂಡಿತ್ತು. ಅದಾಗ್ಯೂ, ಯುರೋಪ್‌ ಪಾರ್ಲಿಮೆಂಟ್‌ ಎಲ್ಲಾ ಮಾದರಿಯ ಸಾಧನಗಳಿಗೂ ಸಿ ಟೈಪ್‌ ಚಾರ್ಜಿಂಗ್‌ ಪೋರ್ಟ್‌ ಅನ್ನು ಕಡ್ಡಾಯಗೊಳಿಸಿ ಹೊಸ ನಿಯಮ ಅನುಮೋದಿಸಿದೆ.

ಅದಾಗ್ಯೂ, ಈ ನಿಯಮವು ಆಪಲ್‌ ಮಾತ್ರವಲ್ಲದರೆ Samsung, Huawei ಮತ್ತು ಇತರ ಸಾಧನ ತಯಾರಕರ ಮೇಲೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

 ಯುರೋಪಿನ ಹೆಚ್ಚಿನ ಶಾಸಕರು ಹೊಸ ನಿಯಮಗಳಿಗೆ ಬೆಂಬಲಿಸಿದ್ದು, ನಿಯಮದ ಪರವಾಗಿ 602 ಮತಗಳು ಮತ್ತು ವಿರುದ್ಧವಾಗಿ ಕೇವಲ 13 ಮತಗಳು ಬಿದ್ದಿವೆ ಎಂದು ವರದಿಯಾಗಿದೆ.

ಒಂದೇ ರೀತಿಯ ಚಾರ್ಜರ್‌ ಇರುವುದರಿಂದ ಗ್ರಾಹಕರು ಬೇರೆ ಬೇರೆ ರೀತಿಯ ಚಾರ್ಜರ್‌ ಗಳಿಗೆ ಹಣ ವ್ಯಯಿಸುವುದು ತಪ್ಪುತ್ತದೆ ಎಂದು ಯುರೋಪಿಯನ್‌ ಕಮಿಷನ್‌ ಭಾವಿಸಿದ್ದು, ಒಂದೇ ಚಾರ್ಜರ್ ನಿಯಮ ಬಂದರೆ ಕೇವಲ ಚಾರ್ಜರ್‌ ಗಳಿಗೆ ವ್ಯಯಿಸುವ ಸುಮಾರು EUR 250 ಮಿಲಿಯನ್ (ಸುಮಾರು ರೂ. 2016 ಕೋಟಿ) ಉಳಿಯುತ್ತದೆ ಎಂದು ಯುರೋಪಿಯನ್ ಕಮಿಷನ್ ಅಂದಾಜಿಸಿದೆ.

2018 ರಲ್ಲಿ ಮೊಬೈಲ್ ಫೋನ್‌ಗಳೊಂದಿಗೆ ಮಾರಾಟವಾದ ಅರ್ಧದಷ್ಟು ಚಾರ್ಜರ್‌ಗಳು ಯುಎಸ್‌ಬಿ ಮೈಕ್ರೋ-ಯುಎಸ್‌ಬಿ ಕನೆಕ್ಟರ್ ಹೊಂದಿದ್ದರೆ, 29 ಪ್ರತಿಶತ ಯುಎಸ್‌ಬಿ ಟೈಪ್-ಸಿ ಕನೆಕ್ಟರ್ ಮತ್ತು 21 ಪ್ರತಿಶತದಷ್ಟು ಲೈಟ್ನಿಂಗ್ ಕನೆಕ್ಟರ್ (ಐಫೋನ್) ಅನ್ನು ಹೊಂದಿದ್ದವು ಎಂದು 2019 ರ ಆಯೋಗದ ಅಧ್ಯಯನವು ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News