×
Ad

ಉಡುಪಿ | ಪಿಸ್ತೂಲ್, ಕತ್ತಿ, ಚಾಕುಗಳನ್ನು ಇಟ್ಟು ಪ್ರಮೋದ್ ಮುತಾಲಿಕ್ ಆಯುಧ ಪೂಜೆ !

Update: 2022-10-05 09:40 IST

ಉಡುಪಿ, ಅ.5: ಉಡುಪಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪಿಸ್ತೂಲ್, ಕತ್ತಿ ಮತ್ತು ಚಾಕುಗಳನ್ನು ಇಟ್ಟು ಆಯುಧ ಪೂಜೆ ನೆರವೇರಿಸಿದ್ದಾರೆ.

ಉಡುಪಿಯ ಶ್ರೀರಾಮಸೇನೆ ಪ್ರಾಂತ ಅಧ್ಯಕ್ಷರ ಮನೆಯಲ್ಲಿ ಮುತಾಲಿಕ್ ನೇತೃತ್ವದಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ನೆರವೇರಿಸಲಾಯಿತು.

ಬಳಿಕ ಎಲ್ಲರಿಗೂ ನವರಾತ್ರಿ ದಸರಾದ ಶುಭಾಶಯ ಕೋರಿದ ಮುತಾಲಿಕ್, ಹಿಂದುತ್ವ ಮತ್ತು ಭಾರತದ ಉಳಿವಿಗಾಗಿ ದುರ್ಗಾಮಾತೆಯ ಪೂಜೆ ಮಾಡಿದ್ದೇವೆ. ಎಲ್ಲರೂ ಇದೇ ಮಾದರಿಯಲ್ಲಿ ಆಯುಧ ಪೂಜೆ ಮಾಡಬೇಕು. ಭಾರತ ಮಾತೆಯ ಉಳಿವಿಗಾಗಿ ಕ್ಷಾತ್ರತ್ವ ಬೆಳೆಸಬೇಕು ಎಂದು ಕರೆ ನೀಡಿದರು.

ಶ್ರೀರಾಮ ಸೇನೆ ಮುಖಂಡ ಮೋಹನ್ ಭಟ್, ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಮತ್ತಿತರರು ಆಯುಧ ಪೂಜೆಯಲ್ಲಿ ಭಾಗಿಯಾದರು.

ಇದನ್ನೂ ಓದಿ: ಉತ್ತರ ಪ್ರದೇಶ: ಎಲ್‍ಇಡಿ ಟಿವಿ ಸ್ಫೋಟಗೊಂಡು ಬಾಲಕ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News