ಉಕ್ರೇನ್ ಗೆ ಅಮೆರಿಕದ ಮಿಲಿಟರಿ ನೆರವಿನಿಂದ ರಶ್ಯದ ಹಿತಾಸಕ್ತಿಗೆ ಬೆದರಿಕೆ: ರಶ್ಯ ರಾಯಭಾರಿ ಆರೋಪ

Update: 2022-10-05 16:54 GMT

ಮಾಸ್ಕೊ, ಅ.5: ಉಕ್ರೇನ್ಗೆ ಹೆಚ್ಚಿನ ಮಿಲಿಟರಿ ನೆರವು ಒದಗಿಸುವ ಅಮೆರಿಕದ ನಿರ್ಧಾರವು ರಶ್ಯದ ಹಿತಾಸಕ್ತಿಗೆ ಬೆದರಿಕೆ ಒಡ್ಡಿದೆ ಮತ್ತು ರಶ್ಯ ಹಾಗೂ ಪಾಶ್ಚಿಮಾತ್ಯರ ನಡುವಿನ ಮಿಲಿಟರಿ ಘರ್ಷಣೆಯ ಅಪಾಯವನ್ನು ಹೆಚ್ಚಿಸಿದೆ ಎಂದು ಅಮೆರಿಕಕ್ಕೆ ರಶ್ಯದ ರಾಯಭಾರಿ ಅನಾಟೊಲಿ ಅಂಟೊನೊವ್ ಹೇಳಿದ್ದಾರೆ. ಇದು ನಮ್ಮ ದೇಶದ ವ್ಯೂಹಾತ್ಮಕ ಹಿತಾಸಕ್ತಿಗಳಿಗೆ ತಕ್ಷಣದ ಬೆದರಿಕೆ ಎಂದು ನಾವು ಗ್ರಹಿಸುತ್ತೇವೆ.

ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳಿಂದ ಮಿಲಿಟರಿ ಉತ್ಪನ್ನಗಳ ಪೂರೈಕೆಯು ದೀರ್ಘಕಾಲದ ರಕ್ತಪಾತ ಮತ್ತು ಹೊಸ ಸಾವುನೋವನ್ನು ಉಂಟುಮಾಡುವ ಜತೆಗೆ, ರಶ್ಯ ಮತ್ತು ಪಾಶ್ಚಿಮಾತ್ಯ ದೇಶಗಳ ಮಧ್ಯೆ ನೇರ ಮಿಲಿಟರಿ ಸಂಘರ್ಷದ ಅಪಾಯವನ್ನು ಹೆಚ್ಚಿಸಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News