ಮೊದಲ ಏಕದಿನ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

Update: 2022-10-06 17:39 GMT
photo: twitter.com/ICC

 ಲಕ್ನೊ, ಅ.6: ಸಂಜು ಸ್ಯಾಮ್ಸನ್(ಔಟಾಗದೆ 86, 63 ಎಸೆತ, 9 ಬೌಂಡರಿ, 3 ಸಿಕ್ಸರ್)ಹಾಗೂ ಶ್ರೇಯಸ್ ಅಯ್ಯರ್(50 ರನ್, 37 ಎಸೆತ, 8 ಬೌಂಡರಿ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ಮಳೆಬಾಧಿತ ಮೊದಲ ಏಕದಿನ ಪಂದ್ಯದಲ್ಲಿ 10 ರನ್‌ನಿಂದ ಸೋಲುಂಡಿದೆ.

ಮಳೆಯಿಂದಾಗಿ 40 ಓವರ್‌ಗೆ ಸೀಮಿತಗೊಂಡ ಪಂದ್ಯದಲ್ಲಿ ಗೆಲ್ಲಲು 250 ರನ್ ಗುರಿ ಪಡೆದ ಭಾರತವು 40 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ದಕ್ಷಿಣ ಆಫ್ರಿಕಾದ ವೇಗಿಗಳಾದ ಲುಂಗಿ ಗಿಡಿ(3-52)ಹಾಗೂ ಕಾಗಿಸೊ ರಬಾಡ(2-36)ಐದು ವಿಕೆಟ್‌ಗಳನ್ನು ಹಂಚಿಕೊಂಡು ದ.ಆಫ್ರಿಕಾಕ್ಕೆ ರೋಚಕ ಜಯ ತಂದರು. ಭಾರತಕ್ಕೆ ಧವನ್(4) ಹಾಗೂ ಶುಭಮನ್ ಗಿಲ್(3)ಉತ್ತಮ ಆರಂಭ ಒದಗಿಸಿಕೊಡಲು ವಿಫಲರಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ ಹೆನ್ರಿಕ್ ಕ್ಲಾಸೆನ್(ಔಟಾಗದೆ 74 ರನ್)ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 75) 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 139 ರನ್ ನೆರವಿನಿಂದ ಭಾರತದ ಗೆಲುವಿಗೆ 250 ರನ್ ಗುರಿ ನೀಡಿತು.

ಇನಿಂಗ್ಸ್ ಆರಂಭಿಸಿದ ಮಲನ್(22 ರನ್)ಹಾಗೂ ಕ್ವಿಂಟನ್ ಡಿಕಾಕ್(48 ರನ್)ಮೊದಲ ವಿಕೆಟಿಗೆ 49 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ನಾಯಕ ಟೆಂಬಾ ಬವುಮಾ(8 ರನ್) ಮತ್ತೊಮ್ಮೆ ವಿಫಲರಾದರು. ದಕ್ಷಿಣ ಆಫ್ರಿಕಾವು 23ನೇ ಓವರ್‌ನಲ್ಲಿ 110 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಆಗ ಜೊತೆಯಾದ ಡೇವಿಡ್ ಮಿಲ್ಲರ್(ಔಟಾಗದೆ 75, 63 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ಹೆನ್ರಿಕ್ ಕ್ಲಾಸೆನ್(ಔಟಾಗದೆ 74 ರನ್, 65 ಎಸೆತ, 6 ಬೌಂಡರಿ, 2 ಸಿಕ್ಸರ್)ಭರ್ಜರಿ ಜೊತೆಯಾಟದ ಮೂಲಕ ದಕ್ಷಿಣ ಆಫ್ರಿಕಾವು 40 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಲು ನೆರವಾದರು.

 ಭಾರತದ ಪರ ಶಾರ್ದೂಲ್ ಠಾಕೂರ್(2-35) ಎರಡು ವಿಕೆಟ್ ಪಡೆದರಲ್ಲದೆ 33 ರನ್ ಗಳಿಸಿ ಗಮನ ಸೆಳೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News