×
Ad

ವಿಶ್ವದ ಹಿರಿಯ ಶ್ವಾನ ಇನ್ನಿಲ್ಲ

Update: 2022-10-06 23:04 IST

ನ್ಯೂಯಾರ್ಕ್, ಅ.6: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದ ಪೆಬ್ಲೆಸ್ ಅಕ್ಟೋಬರ್ 3ರಂದು ಸೌತ್ ಕರೋಲಿನಾದ ಟೇಲರ್ಸ್ನಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

22  ವರ್ಷ 7 ತಿಂಗಳು ಪ್ರಾಯದ ಹೆಣ್ಣುನಾಯಿ  ಪೆಬ್ಲೆಸ್ ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ 2000ನೇ ಇಸವಿ ಮಾರ್ಚ್ 28ರಂದು ಹುಟ್ಟಿತ್ತು. ಬಾಬಿ ಮತ್ತು ಜೂಲಿ ಗ್ರೆಗೊರಿ ಇದರ ಮಾಲಕರು. 32 ಮರಿ ಹಾಕಿರುವ `ಟಾಯ್ ಫಾಕ್ಸ್ ಟೆರಿಯರ್' ತಳಿಯ  ಪೆಬ್ಲೆಸ್ ಸಂತೋಷದ ಮತ್ತು ದೀರ್ಘ ಜೀವನ ನಡೆಸಿದೆ. ಪೆಬ್ಲೆಸ್ಗೆ ಮಾಂಸ ಅಧಾರಿತ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತಿತ್ತು. ಅಲ್ಲದೆ ಹೊಸ ಹೊಸ ಖಾದ್ಯವನ್ನು ಖುಷಿಯಿಂದ ತಿನ್ನುತ್ತಿತ್ತು.  ಅದರ ಸಂಗಾತಿಯಾಗಿದ್ದ ರಾಕಿ 2017ರಲ್ಲಿ ಮೃತಪಟ್ಟಿದೆ ಎಂದು ಜೂಲಿ ಗ್ರೆಗೊರಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News