ಮಕ್ಕಾದ ಗ್ರ್ಯಾಂಡ್‌ ಮಸೀದಿಯ ಗೇಟ್ 100ಕ್ಕೆ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಹೆಸರು

Update: 2022-10-07 17:34 GMT
PHOTO : Twitter

ಜೆದ್ದಾ, ಅ.7: ಮಕ್ಕಾದ ಗ್ರಾಂಡ್ ಮಸೀದಿಯ ಗೇಟ್ 100ಕ್ಕೆ ಸೌದಿ ಅರೆಬಿಯಾದ ದಿವಂಗತ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಅವರ ಹೆಸರಿಡಲಾಗಿದೆ ಎಂದು ಎರಡು ಪವಿತ್ರ ಮಸೀದಿಗಳ ಜನರಲ್ ಪ್ರೆಸಿಡೆನ್ಸಿ  ಘೋಷಿಸಿದೆ.

ಎರಡು ಪವಿತ್ರ ಮಸೀದಿಗಳನ್ನು ವಿಸ್ತರಿಸುವ ಮೂಲಕ ಮತ್ತು ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಮೂಲಕ ಯಾತ್ರಿಕರು ತಮ್ಮ ಧಾರ್ಮಿಕ ಕ್ರಿಯೆಗಳನ್ನು ಸುಲಭವಾಗಿ ನಿರ್ವಹಿಸಲು ಅನುವು ಮಾಡಿಕೊಡುವ ಪ್ರಯತ್ನದ  ಭಾಗವಾಗಿ ಗೇಟ್ 100ಕ್ಕೆ ದಿವಂಗತ ದೊರೆಯ ಹೆಸರನ್ನು ಇಡಲಾಗಿದೆ. ಸೌದಿ ರಾಜರು ಯಾವಾಗಲೂ 2 ಪವಿತ್ರ ಮಸೀದಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಮತ್ತು ಅಲ್ಲಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು  ಪ್ರೆಸಿಡೆನ್ಸಿಯ ಮುಖ್ಯಸ್ಥ ಶೇಖ್ ಅಬ್ದುಲ್ ರಹ್ಮಾನ್ ಅಲ್- ಸುದೈಸ್ ಹೇಳಿದ್ದಾರೆ. ಮಕ್ಕಾದಲ್ಲಿರುವ ಗ್ರಾಂಡ್‌ ಮಸೀದಿ ಅಥವಾ ಮಸ್ಜಿದುಲ್‌ ಹರಾಮ್‌ ಗೆ 210 ಗೇಟ್ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News