×
Ad

ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲೆ ಭಾರೀ ಸ್ಫೋಟ

Update: 2022-10-08 13:55 IST
Photo: Twitter/@saintjavelin

ಮಾಸ್ಕೋ:  ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಹಾಗೂ  ರೈಲು ಸೇತುವೆಯಲ್ಲಿ  ಟ್ರಕ್ ಸ್ಫೋಟಗೊಂಡು   ಭಾರೀ  ಹಾನಿಯಾಗಿದ್ದು, ಸ್ಫೋಟದ ಬಗ್ಗೆ ರಷ್ಯಾ ಶನಿವಾರ ಕ್ರಿಮಿನಲ್ ತನಿಖೆಯನ್ನು ಆರಂಭಿಸಿದೆ.

"ಕ್ರೈಮಿಯಾ ಸೇತುವೆಯ ಮೇಲಿನ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣವನ್ನು ಆರಂಭಿಸಲಾಗಿದೆ. ಸೇತುವೆಯಲ್ಲಿ "ಟ್ರಕ್ ಅನ್ನು ಸ್ಫೋಟಿಸಲಾಗಿದೆ" ಎಂದು ರಷ್ಯಾದ ತನಿಖಾ ಸಮಿತಿಯು ತಿಳಿಸಿದೆ.

"ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಕ್ರೈಮಿಯಾ ಸೇತುವೆಯ ಆಟೋಮೊಬೈಲ್ ಭಾಗದಲ್ಲಿ, ಟ್ರಕ್ ಅನ್ನು ಸ್ಫೋಟಿಸಲಾಗಿದೆ, ಇದು ಕ್ರೈಮಿಯಾ ಪರ್ಯಾಯ ದ್ವೀಪದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿನ  ಏಳು ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ಹೊತ್ತಿಕೊಳ್ಳಲು  ಕಾರಣವಾಯಿತು" ಎಂದು ಸಮಿತಿ ಹೇಳಿದೆ. .

 ಕ್ರೆಮ್ಲಿನ್‌ಗೆ ಅತ್ಯಂತ ಮಹತ್ವದ್ದಾಗಿರುವ  ಬೃಹತ್ ಸೇತುವೆಯನ್ನು 2018 ರಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ಘಾಟಿಸಿದ್ದರು. ಈ ಸೇತುವೆ ಬೆಂಕಿಯಲ್ಲಿ ಭಾಗಶಃ ಸಮುದ್ರಕ್ಕೆ ಕುಸಿದುಬೀಳುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News