‘ಉತ್ಕರ್ಷ’ ಬೋಧಕರ ಅಭಿವೃದ್ದಿ ಕಾರ್ಯಾಗಾರ
Update: 2022-10-08 17:18 IST
ಶಿರ್ವ, ಅ.8: ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ಆಂತರಿಕ ಗುಣಮಟ್ಟ ಘಟಕವು ಐಎಸ್‌ಟಿಇ ಘಟಕದ ಸಹಯೋಗ ದೊಂದಿಗೆ ಐದು ದಿನದ ಬೋಧಕರ ಅಭಿವೃದ್ದಿ ಕಾರ್ಯಾಗಾರ ಉತ್ಕರ್ಷವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ವಿಪ್ರೋ ಟೆಕ್ನಾಲಜೀಸ್ ಮಿಷನ್ ಸಂಪನ್ಮೂಲ ವ್ಯಕ್ತಿ ಭಗವಾನ್ ಎಸ್.ಕೆ. ಮತ್ತು ಡಾ.ರಾಜೇಂದ್ರ ಜೋಶಿ ಕಾರ್ಯಾಗಾರವನ್ನು ನಡೆಸಿ ಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆ ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ವಹಿಸಿದ್ದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ರಾವ್ ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಯಶಸ್ವಿನಿ ಎ.ಎಸ್., ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಲಹರಿ ವ್ಯೆದ್ಯ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು, ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಸುಧೀರ್ ವಂದಿಸಿದರು. ಗಣಕಯಂತ್ರ ವಿಭಾಗದ ಸೌಮ್ಯ ಎಸ್. ಕಾರ್ಯಕ್ರಮ ಸಂಯೋಜಿಸಿದರು.