×
Ad

ರೊನಾಲ್ಡೊಗೆ '700 ಕ್ಲಬ್‌ಗೆ ಸ್ವಾಗತ' ಎಂದು ಟ್ರೋಲ್ ಗೊಳಗಾದ ಯುವರಾಜ್ ಸಿಂಗ್

Update: 2022-10-10 12:07 IST
photo: pti

ಹೊಸದಿಲ್ಲಿ: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗಾಗಿ ಮಾಡಿರುವ ಅಭಿನಂದನಾ ಟ್ವೀಟ್‌ನಲ್ಲಿನ ದೋಷಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

ಎರಡು ಬಾರಿ ವಿಶ್ವಕಪ್ ವಿಜೇತ ಭಾರತದ ಮಾಜಿ ಆಲ್‌ರೌಂಡರ್, ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರರ ಬಗ್ಗೆ ಆಗಾಗ್ಗೆ ಟ್ವೀಟ್ ಮಾಡುತ್ತಾರೆ.

ಎವರ್ಟನ್ ವಿರುದ್ಧದ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ತಮ್ಮ ಐತಿಹಾಸಿಕ 700 ನೇ ಕ್ಲಬ್ ಗೋಲು ಗಳಿಸಿದ್ದಕ್ಕಾಗಿ ರೊನಾಲ್ಡೊ ಅವರನ್ನು ಯುವಿ ಶ್ಲಾಘಿಸಿದರು. ಆದರೆ ಯುವರಾಜ್ ಶ್ಲಾಘನೆ ವೇಳೆ ಆಯ್ದುಕೊಂಡ ಪದಗಳೇ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟ್ರೋಲ್ ಆಗಲು ಕಾರಣವಾಯಿತು.

"ಕಿಂಗ್ ಈಸ್ ಬ್ಯಾಕ್! ಫಾರ್ಮ್ ಶಾಶ್ವತ! ದಂತಕತೆಗೆ 700 ಕ್ಲಬ್ ಗೆ ಸ್ವಾಗತ" ಯುವರಾಜ್ ಟ್ವೀಟ್ ಮಾಡಿದ್ದಾರೆ.

ಯುವರಾಜ್ ಅವರ 'ವೆಲ್‌ಕಮ್ ಟು 700 ಕ್ಲಬ್' ಎಂಬ ಪದವೇ  ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದವು. ವಾಸ್ತವವಾಗಿ, ರೊನಾಲ್ಡೊ ರವಿವಾರ ಫುಟ್ಬಾಲ್ ಇತಿಹಾಸದಲ್ಲಿ 700 ಕ್ಲಬ್ ಮೈಲಿಗಲ್ಲನ್ನು ಸಾಧಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ಟ್ವಿಟರ್ ಬಳಕೆದಾರರು ಯುವರಾಜ್ ಅವರ ಟ್ವೀಟ್‌ನಲ್ಲಿನ ದೋಷವನ್ನು ಗುರುತಿಸಿ ಅವರನ್ನು ಟ್ರೋಲ್ ಮಾಡಿದ್ದಾರೆ. ಕೆಲವು ಬಳಕೆದಾರರು 'ಕ್ಲಬ್‌ಗೆ ಸ್ವಾಗತ' ಪದಗುಚ್ಛದ ಸರಿಯಾಗಿ ಬಳಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News