700 ಕ್ಲಬ್ ಗೋಲುಗಳನ್ನು ಗಳಿಸಿ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
Update: 2022-10-10 12:19 IST
ಮ್ಯಾಡ್ರಿಡ್: ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ Cristiano Ronaldo ಅವರು ರವಿವಾರ ಉನ್ನತ ಮಟ್ಟದ ಫಟ್ಬಾಲ್‌ನಲ್ಲಿ 700 ಕ್ಲಬ್ ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯೊಂದಿಗೆ ಇತಿಹಾಸವನ್ನು ನಿರ್ಮಿಸಿದ್ದಾರೆ.
ಎವರ್ಟನ್ ವಿರುದ್ಧದ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 44ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ 37ರ ಹರೆಯದ ರೊನಾಲ್ಡೊ ಈ ಮೈಲಿಗಲ್ಲನ್ನು ತಲುಪಿದರು.
ಸ್ಪೋರ್ಟಿಂಗ್ ಲಿಸ್ಬನ್, ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಹಾಗೂ ಜುವೆಂಟಸ್‌ಗಾಗಿ 943 ಪಂದ್ಯಗಳಲ್ಲಿ ಆಡಿರುವ ಐದು ಬಾರಿ ಬ್ಯಾಲನ್ ಡಿಒರ್ ಪ್ರಶಸ್ತಿ ವಿಜೇತ ರೊನಾಲ್ಡೊ ಇದೀಗ ಒಟ್ಟು 700 ಕ್ಲಬ್ ಗೋಲುಗಳನ್ನು ಗಳಿಸಿದ್ದಾರೆ. ಮ್ಯಾಡ್ರಿಡ್ ಪರ ಒಟ್ಟು 450 ಗೋಲು ಗಳಿಸಿ ದಾಖಲೆ ನಿರ್ಮಿಸಿದ್ದರು. ಮ್ಯಾಂಚೆಸ್ಟರ್ ಪರ ಒಟ್ಟು 144 ಗೋಲು ಗಳಿಸಿದ್ದಾರೆ. ಜುವೆಂಟಸ್ ಪರ 101 ಗೋಲು ಹಾಗೂ ಸ್ಪೋರ್ಟಿಂಗ್ ಲಿಸ್ಬನ್ ಪರ 5 ಗೋಲು ಗಳಿಸಿದ್ದಾರೆ.