×
Ad

ಗಣಿ ಉದ್ಯಮಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂ ಅನುಮತಿ

Update: 2022-10-10 15:20 IST
Photo:PTI

ಹೊಸದಿಲ್ಲಿ: ಬಹುಕೋಟಿ ಗಣಿ ಹಗರಣದ ಆರೋಪಿ ಹಾಗೂ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ Janardhan Reddy  ಕರ್ನಾಟಕದ ಬಳ್ಳಾರಿಗೆ ಒಂದು ತಿಂಗಳ ಕಾಲ ಭೇಟಿ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿ ಎಂ.ಆರ್.ಶಾ ಅವರ ಪೀಠವು ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ವಿಶೇಷವಾಗಿ ಪ್ರಕರಣದ ಹಲವಾರು ಸಾಕ್ಷಿಗಳು ಬಳ್ಳಾರಿಯವರು ಹಾಗೂ  ರೆಡ್ಡಿ ಜಿಲ್ಲೆಗೆ ಭೇಟಿ ನೀಡುವುದು ಅವರಿಗೆ ಬೆದರಿಕೆಯಾಗಬಹುದು ಎಂಬ ಅಂಶ ಪರಿಗಣನೆಗೆ ತೆಗೆದುಕೊಂಡ ನಂತರ ಈ ಆದೇಶವನ್ನು ಪ್ರಕಟಿಸಿತು.  

ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ ಮಗಳನ್ನು ಭೇಟಿಯಾಗಲು, ತಮ್ಮ ಹುಟ್ಟೂರು ಬಳ್ಳಾರಿಗೆ ಭೇಟಿ ನೀಡಲು ಅನುಮತಿ ಕೋರಿ ರೆಡ್ಡಿ ಮನವಿ ಸಲ್ಲಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News