ಮಿಲಿಟರಿ ಸರ್ವಾಧಿಕಾರಕ್ಕೆ ಆದ್ಯತೆ ನೀಡಿದ್ದರಿಂದ ಪಶ್ಚಿಮವು ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿರಲಿಲ್ಲ: ಜೈಶಂಕರ್

Update: 2022-10-10 17:45 GMT

ಕ್ಯಾನ್‌ಬೆರಾ, ಅ.10: ಭಾರತವು ಸೋವಿಯತ್ ಮತ್ತು ರಶ್ಯಾ ಮೂಲದ ಗಣನೀಯ ಪ್ರಮಾಣದ  ಆಯುಧಗಳ ದಾಸ್ತಾನನ್ನು ಹೊಂದಿದೆ, ಯಾಕೆಂದರೆ ಪಾಶ್ಚಿಮಾತ್ಯ ದೇಶಗಳು ಈ ಪ್ರದೇಶದಲ್ಲಿ ಮಿಲಟರಿ ಸರ್ವಾಧಿಕಾರವನ್ನು ತನ್ನ ಆದ್ಯತೆಯ ಪಾಲುದಾರರನ್ನಾಗಿ ಆರಿಸಿಕೊಂಡಿದೆ ಮತ್ತು ದಶಕಗಳ ಕಾಲ ಭಾರತಕ್ಕೆ ಆಯುಧಗಳನ್ನು ಒದಗಿಸಲಿಲ್ಲ ಎಂದು, ಪಾಕಿಸ್ತಾನವನ್ನು  ಪರೋಕ್ಷವಾಗಿ ಉಲ್ಲೇಖಿಸಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (External Affairs Minister S Jaishankar)ಸೋಮವಾರ ಹೇಳಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ  ಪೆನ್ನೀ ವಾಂಗ್ (Penny Wong) ಜತೆ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ-ರಶ್ಯ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದು ಖಂಡಿತವಾಗಿಯೂ ಅದು ಭಾರತದ ಹಿತಾಸಕ್ತಿಗೆ ಪೂರಕವಾಗಿದೆ ಎಂದರು. ಅಂತರಾಷ್ಟ್ರೀಯ ರಾಜಕೀಯದಲ್ಲಿ ನಾವು ನಮ್ಮಲ್ಲಿ ಏನಿದೆಯೋ ಅದರೊಂದಿಗೆ ವ್ಯವಹಾರ ಮಾಡುತ್ತೇವೆ, ನಮ್ಮ ಹಾಲಿ ಪರಿಸ್ಥಿತಿ ಮತ್ತು ಮುಂದಿನ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ಪ್ರಸ್ತುತ ಸಂಘರ್ಷದ ವಿಷಯದಲ್ಲಿ ಮತ್ತು ಪ್ರತೀ ಮಿಲಿಟರಿ ಸಂಘರ್ಷದ ವಿಷಯದಲ್ಲಿ ನಾವು ಕಲಿಯಬೇಕಾದ ವಿಷಯಗಳಿವೆ ಮತ್ತು ಮಿಲಿಟರಿಯಲ್ಲಿನ ನಮ್ಮ ವೃತ್ತಿಪರ ಸಹವರ್ತಿಗಳು ಇದನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ನಡೆಸುತ್ತಾರೆ ಎಂಬ ಖಾತರಿಯಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News