ನಮ್ಮ ಮೇಲೆ ಇನ್ನೊಂದು ಭಾಷಾ ಸಮರವನ್ನು ಹೇರಬೇಡಿ: ತಮಿಳುನಾಡು ಸಿಎಂ. ಸ್ಟಾಲಿನ್

Update: 2022-10-10 17:51 GMT

ಚೆನ್ನೈ, ಅ. 10: ‘‘ನಮ್ಮ ಮೇಲೆ ಇನ್ನೊಂದು ಭಾಷಾ ಸಮರವನ್ನು ಹೇರಬೇಡಿ’’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸೋಮವಾರ ಹೇಳಿದ್ದಾರೆ.ಕೇಂದ್ರ ಸರಕಾರ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್ ನಿಂದ ಹಿಂದಿ ಅಥವಾ ಸ್ಥಳೀಯ ಭಾಷೆಗೆ ಬದಲಾಗಬೇಕು ಹಾಗೂ ಹಿಂದಿ ಭಾಷೆಯನ್ನು ತನ್ನ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಲು ವಿಶ್ವಸಂಸ್ಥೆಯನ್ನು ಕೋರಬೇಕು ಎಂದು ಸಂಸತ್ತಿನ ಭಾಷಾ ಸಮಿತಿ ಹೇಳಿದ ಬಳಿಕ ಎಂ.ಕೆ. ಸ್ಟಾಲಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.ಹಿಂದಿ ಮಾತನಾಡುವವರು ಮಾತ್ರ ಭಾರತೀಯ ಪ್ರಜೆಗಳು ಹಾಗೂ ಇತರರು ಎರಡನೇ ದರ್ಜೆ ಪ್ರಜೆಗಳು ಎಂದು ಬಿಂಬಿಸುತ್ತಿರುವುದು ವಿಭಿಜಿಸಿ ಆಳುವ ನೀತಿ ಎಂದು ಅವರು ಹೇಳಿದರು.

ಸರಕಾರವು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಎಲ್ಲ ೮ನೇ ಪರಿಚ್ಛೇದದ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಪರಿಗಣಿಸಬೇಕು ಎಂದು ಸ್ಟಾಲಿನ್ ತಿಳಿಸಿದರು.ಭಾರತ ಸಂವಿಧಾನದ 8ನೇ ಪರಿಚ್ಛೇದ ಹಿಂದಿ, ತಮಿಳು ಹಾಗೂ ಇಂಗ್ಲೀಷ್ ಸೇರಿದಂತೆ 22 ಭಾಷೆಗಳನ್ನು ಪರಿಗಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿ ಬಳಕೆಯಲ್ಲಿ ಪ್ರಗತಿಯ ಪರಿಶೀಲನೆ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಯ ಕುರಿತ ಸಂಸದೀಯ ಸಮಿತಿ ತನ್ನ ಇತ್ತೀಚೆಗಿನ ವರದಿಯನ್ನು ಕಳೆದ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News