×
Ad

ನಾನು ಮುಸ್ಲಿಮರನ್ನು ಎಂದಿಗೂ ಟೀಕಿಸಿಲ್ಲ: ಬಿಜೆಪಿಯ ಶೋಕಾಸ್ ನೋಟಿಸ್‌ಗೆ ಜೈಲಿನಲ್ಲಿರುವ ಶಾಸಕ ಟಿ. ರಾಜಾ ಸಿಂಗ್ ಉತ್ತರ

Update: 2022-10-11 12:27 IST
ಶಾಸಕ ಟಿ. ರಾಜಾ ಸಿಂಗ್ (Photo: Twitter/T Raja Singh)

ಹೊಸದಿಲ್ಲಿ: ನಾನು  ಮುಸ್ಲಿಮರನ್ನು ಎಂದಿಗೂ ಟೀಕಿಸಿಲ್ಲ ಎಂದು ಬಿಜೆಪಿ  ಶಾಸಕ ಟಿ. ರಾಜಾ ಸಿಂಗ್ T Raja Singh ಸೋಮವಾರ ಹೇಳಿದ್ದಾರೆ ಎಂದು ANI ವರದಿ ಮಾಡಿದೆ.

ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರಿವೆಂಟಿವ್ ಡಿಟೆನ್ಶನ್ ಆ್ಯಕ್ಟ್ ಅಡಿಯಲ್ಲಿ ಜೈಲಿನಲ್ಲಿರುವ ಸಿಂಗ್, ಆಗಸ್ಟ್ 23 ರಂದು ಬಿಜೆಪಿ ನೀಡಿದ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸಿದರು.

ಪ್ರವಾದಿಯ ಬಗ್ಗೆ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಅವಹೇಳನಕಾರಿ ಹೇಳಿಕೆಗಳನ್ನು ರಾಜಾ ಪುನರಾವರ್ತಿಸಿದ್ದರಿಂದ ಹೈದರಾಬಾದ್‌ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದ ದಿನವೇ  ರಾಜಾನನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು.

ಪಕ್ಷಕ್ಕೆ ಅಗೌರವ ತರುವ ಯಾವುದನ್ನೂ ಮಾಡುವುದಿಲ್ಲ ಎಂದು ಬಿಜೆಪಿ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್‌ಗೆ ನೀಡಿದ ಉತ್ತರದಲ್ಲಿ ಸಿಂಗ್ ಭರವಸೆ ನೀಡಿದ್ದಾರೆ.

ನಾನು  ಲೋಕಸಭೆ ಸಂಸದ ಅಸದುದ್ದೀನ್ ಉವೈಸಿ ಅವರ ಎಐಎಂಐಎಂ ಪಕ್ಷವನ್ನು ಟೀಕಿಸಿದಾಗಲೆಲ್ಲ ತಾನು ಮುಸ್ಲಿಮರನ್ನು ಟೀಕಿಸುತ್ತಿದ್ದೇನೆ ಎಂಬ ಭಾವನೆ ಮೂಡಿಸುತ್ತಾರೆ ಎಂದು ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News