ತನ್ನನ್ನು ನಿಂದಿಸಲು ಕಾಂಗ್ರೆಸ್ ಹೊರಗುತ್ತಿಗೆ ನೀಡಿದೆ: ಪ್ರಧಾನಿ ನರೇಂದ್ರ ಮೋದಿ
ಅಹ್ಮದಾಬಾದ್: ತನ್ನನ್ನು ನಿಂದಿಸಲು ಕಾಂಗ್ರೆಸ್ ಹೊರಗುತ್ತಿಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾ ಪಟ್ಟಣದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಬೇಕು ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್ ತನ್ನನ್ನು ನಿಂದಿಸುವುದನ್ನು ನಿಲ್ಲಿಸಿದೆ ಮತ್ತು ಗ್ರಾಮೀಣ ಮತಗಳನ್ನು ಸೆಳೆಯಲು "ಮೌನವಾಗಿ ಕೆಲಸ ಮಾಡುತ್ತಿದೆ" ಎಂದು ಹೇಳಿದರು.
"ಕಳೆದ 20 ವರ್ಷಗಳಲ್ಲಿ, ಗುಜರಾತ್ ವಿರುದ್ಧ ಇದ್ದವರು ರಾಜ್ಯದ ಮಾನಹಾನಿ ಮಾಡಲು ಸಿಗುವ ಯಾವುದೇ ಕಲ್ಲನ್ನು ಬಿಡಲಿಲ್ಲ. ಅವರು ನನ್ನನ್ನು "ಮೌತ್ ಕಾ ಸೌದಾಗರ್" ಎಂದು ಕರೆಯುವುದು ಸೇರಿದಂತೆ ನನ್ನ ವಿರುದ್ಧ ಬಹಳ ನಿಂದನೆಗಳನ್ನು ಮಾಡಿದರು," ಎಂದು ಮೋದಿ ಹೇಳಿದ್ದಾರೆ.
"ಅವರು ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ. ಅವರು ಗಲಾಟೆ ಸೃಷ್ಟಿಸುವ, ಗಲಾಟೆ ಮಾಡುವ ಮತ್ತು ನನ್ನನ್ನು ನಿಂದಿಸುವ ಗುತ್ತಿಗೆಯನ್ನು ಇತರರಿಗೆ ನೀಡಿದ್ದಾರೆ. ಅವರು ಮೌನವಾಗಿ ಹಳ್ಳಿಗಳಿಗೆ ಹೋಗಿ ಜನರ ಮತ ಕೇಳುತ್ತಿದ್ದಾರೆ" ಎಂದು ಮೋದಿ ಹೇಳಿದ್ದಾರೆ.
"ಗುಜರಾತ್ ವಿರುದ್ಧ ದಿಲ್ಲಿಯಿಂದ ಪಿತೂರಿ ನಡೆಸುತ್ತಿರುವವರು ಇದನ್ನು ನಿಯಂತ್ರಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ ಹಾಗಾಗಿ ವಿರೋಧ ಪಕ್ಷದ ಈ ಮೌನ ತಂತ್ರದ ವಿರುದ್ಧ ನಿಮಗೆ ನಾನು ಎಚ್ಚರಿಕೆ ನೀಡಬೇಕು" ಎಂದು ಪ್ರಧಾನಿ ಹೇಳಿದರು.
ಮಣ್ಣಿನ ಮಗ ಸರ್ದಾರ್ ಪಟೇಲ್ ಅವರನ್ನು ಗೌರವಿಸದವರಿಗೆ ಗುಜರಾತ್‌ನಲ್ಲಿ ಸ್ಥಾನ ನೀಡಬಾರದು ಎಂದು ಮೋದಿ ಹೇಳಿದರು.