×
Ad

ಆಸ್ಕರ್‌ ಪ್ರವೇಶ ಪಡೆದ ʼಛೆಲೋ ಶೋʼ ಚಿತ್ರದ ಬಾಲನಟ ನಿಧನ

Update: 2022-10-11 19:59 IST
ಛೆಲೋ ಶೋ ಚಿತ್ರದ ಒಂದು ದೃಶ್ಯ (via twitter)

ಹೊದಿಲ್ಲಿ: ಛೆಲೋ ಶೋ (ದಿ ಲಾಸ್ಟ್ ಫಿಲ್ಮ್ ಶೋ) ಚಿತ್ರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ ಬಾಲ ನಟ ರಾಹುಲ್ ಕೋಲಿ ತಮ್ಮ 10 ನೇ ವಯಸ್ಸಿನಲ್ಲಿ ನಿಧನರಾದರು. ರಕ್ತ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ರಾಹುಲ್ ಅಕ್ಟೋಬರ್ 2 ರಂದು ಕೊನೆಯುಸಿರೆಳೆದಿದ್ದಾರೆ. 

2023 ರ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಛೆಲೋ ಶೋ ಚಿತ್ರ ಪ್ರವೇಶ ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಛೆಲೋ ಶೋ ಬಿಡುಗಡೆಯಾಗಬೇಕಿತ್ತು.

ಜೀವನೋಪಾಯಕ್ಕಾಗಿ ಆಟೋರಿಕ್ಷಾ ಓಡಿಸುವ ರಾಹುಲ್ ತಂದೆ ರಾಮು ಕೋಲಿ, ತಮ್ಮ ಮಗ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಎಂದು‌ ವಿಷಾದದಿಂದ ಹೇಳಿದ್ದಾರೆ.

"ಆತ ತುಂಬಾ ಸಂತೋಷವಾಗಿದ್ದ. ಅಕ್ಟೋಬರ್ 14ರ (ಚಲನಚಿತ್ರದ ಬಿಡುಗಡೆಯ ದಿನಾಂಕ) ನಂತರ ನಮ್ಮ ಜೀವನವು ಬದಲಾಗುತ್ತದೆ ಎಂದು ಆಗಾಗ್ಗೆ ಹೇಳುತ್ತಿದ್ದ. ಆದರೆ ಅದಕ್ಕೂ ಮೊದಲೇ ಅವನು ನಮ್ಮನ್ನು ಅಗಲಿದ್ದಾನೆ" ಎಂದು ರಾಮು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಗುಜರಾತಿ ಚಲನಚಿತ್ರವಾದ ಛೆಲೋ ಶೋ ಈ ವರ್ಷ ಆಸ್ಕರ್‌ಗೆ ಭಾರತದಿಂದ ಆಯ್ಕೆಯಾಗಿದೆ.  
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News