ಅಮೆರಿಕದಲ್ಲಿ ಕಮಲಾ ಹ್ಯಾರಿಸ್ ದಾಖಲೆ

Update: 2022-10-11 17:32 GMT
KAMALA HARRIS(PHOTO: PTI)

ವಾಷಿಂಗ್ಟನ್, ಅ.11: ಅಮೆರಿಕವು ಯಾವುದಾದರೂ ದೇಶದ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಬೇಕಿದ್ದರೆ, ಪರಮಾಣು ಬಾಂಬ್‌ನ ಗುಂಡಿ ಒತ್ತಲು ಅಧ್ಯಕ್ಷರ ಸೂಚನೆ ಅಗತ್ಯವಿರುತ್ತದೆ. ಪರಮಾಣು ಅಸ್ತ್ರದ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ‘ಬಿಸ್ಕಿಟ್’ ಅಥವಾ ಫುಟ್‌ಬಾಲ್ ಎಂಬ ಗೂಢ ನಾಮ ಹೊಂದಿರುವ ಬ್ರೀಫ್‌ಕೇಸ್ ಅಮೆರಿಕ ಅಧ್ಯಕ್ಷರ ನಿಯಂತ್ರಣದಲ್ಲಿರುತ್ತದೆ.

ಅಧ್ಯಕ್ಷರು ಯಾವ ದೇಶಕ್ಕೆ ಹೋದರೂ ಈ ವ್ಯವಸ್ಥೆ ಅವರ ನಿಯಂತ್ರಣದಲ್ಲಿರುತ್ತದೆ. ಆದರೆ ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ, ಪರಮಾಣು ಅಸ್ತ್ರದ ಬಟನ್‌ನ ಉಸ್ತುವಾರಿ ಮಹಿಳೆಯೊಬ್ಬರ ಸ್ವಾಧೀನಕ್ಕೆ ಬಂದಿತ್ತು. 2021ರ ನವೆಂಬರ್ 10ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅನಸ್ತೇಷಿಯಾದ ಪ್ರಭಾವದಲ್ಲಿದ್ದಾಗ 85 ನಿಮಿಷ ಪರಮಾಣು ಬಟನ್‌ನ ನಿಯಂತ್ರಣ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸುಪರ್ದಿಯಲ್ಲಿತ್ತು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಅಮೆರಿಕ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯ ನಿರ್ವಹಿಸಿದ ಪ್ರಥಮ ಮಹಿಳೆಯಾಗಿ ಕಮಲಾ ಹ್ಯಾರಿಸ್ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News