ಮಾರ್ಕ್ ಝುಕರ್‌ಬರ್ಗ್‌ ರ ಮೆಟಾವನ್ನು 'ಭಯೋತ್ಪಾದಕ ಮತ್ತು ಉಗ್ರಗಾಮಿ' ಸಂಘಟನೆಗಳ ಪಟ್ಟಿಗೆ ಸೇರಿಸಿದ ರಷ್ಯಾ

Update: 2022-10-12 10:33 GMT

ಮಾಸ್ಕೋ: ರಷ್ಯಾದ ಹಣಕಾಸು ಮೇಲ್ವಿಚಾರಣಾ ಸಂಸ್ಥೆ, ರೋಸ್ಫಿನ್‌ ಮೋನಿಟರಿಂಗ್, ಯುಎಸ್ ಟೆಕ್ ದೈತ್ಯ ಮೆಟಾ ಪ್ಲಾಟ್‌ಫಾರ್ಮ್ಸ್ ಅನ್ನು ತನ್ನ "ಭಯೋತ್ಪಾದಕರು ಮತ್ತು ಉಗ್ರಗಾಮಿಗಳ" ಪಟ್ಟಿಗೆ ಸೇರಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ಮಂಗಳವಾರ ವರದಿ ಮಾಡಿವೆ.

ಮಾರ್ಚ್‌ನಲ್ಲಿ ರಷ್ಯಾದಲ್ಲಿ "ಉಗ್ರಗಾಮಿ ಚಟುವಟಿಕೆ" ಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಜೂನ್‌ನಲ್ಲಿ ಮಾಸ್ಕೋ ನ್ಯಾಯಾಲಯವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮಾಲೀಕ ಸಂಸ್ಥೆ ಮೆಟಾದ ಮನವಿಯನ್ನು ತಿರಸ್ಕರಿಸಿತು. ನ್ಯಾಯಾಲಯದಲ್ಲಿ, ಆ ವೇಳೆ ಮೆಟಾದ ವಕೀಲರು ಮೆಟಾ ಉಗ್ರಗಾಮಿ ಚಟುವಟಿಕೆಯನ್ನು ನಡೆಸುತ್ತಿಲ್ಲ ಮತ್ತು ರಸ್ಸೋಫೋಬಿಯಾ ವಿರುದ್ಧವಾಗಿದೆ ಎಂದು ಹೇಳಿದರು.

ಮಂಗಳವಾರ ಈ ಕುರಿತು ಮಾಹಿತಿಗಾಗಿ ಇಮೇಲ್ ಮಾಡಿದ್ದಕ್ಕೆ ಮೆಟಾ ಪ್ರತ್ಯುತ್ತರ ನೀಡಲಿಲ್ಲ ಎಂದು ತಿಳಿದು ಬಂದಿದೆ. Rosfinmonitoring ಪಟ್ಟಿಯು "ಉಗ್ರಗಾಮಿ ಚಟುವಟಿಕೆಗಳು ಅಥವಾ ಭಯೋತ್ಪಾದನೆಯ ಬಗ್ಗೆ ಮಾಹಿತಿ ಇರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ" ಸಂಬಂಧಿಸಿದೆ.

ಮಾಸ್ಕೋ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಲಾಗಿನ್‌ ಮಾಡುವುದನ್ನು ನಿರ್ಬಂಧಿಸಿದೆ, ಆದಾಗ್ಯೂ ರಷ್ಯಾದ ಅನೇಕ ಬಳಕೆದಾರರು ಇನ್ನೂ ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು (ವಿಪಿಎನ್‌ಗಳು) ಬಳಸಿಕೊಂಡು ಅವುಗಳನ್ನು ಪ್ರವೇಶಿಸುತ್ತಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News