ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ನಿಂದ 10 ಹೆಣ್ಮಕ್ಕಳ ಮದುವೆ: ಅರ್ಹರಿಂದ ಅರ್ಜಿ ಆಹ್ವಾನ
Update: 2022-10-14 15:36 IST
ಮಂಗಳೂರು, ಅ.14: ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ (ರಿ) ಬರ್ಕೆ, ಇದರ ವತಿಯಿಂದ ತೀರಾ ಬಡ ಹಾಗೂ ನಿರ್ಗತಿಕ 10 ಹೆಣ್ಣು ಮಕ್ಕಳ ಮದುವೆ ಮಾಡಿಸಲು ನಿರ್ಧರಿಸಿದೆ. ಆದ್ದರಿಂದ ಅರ್ಹ ಹೆಣ್ಣು ಮಕ್ಕಳ ಅರ್ಜಿಯನ್ನು ನವೆಂಬರ್ ಕೊನೆಯ ವಾರದೊಳಗಾಗಿ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ಅಝೀಝುದ್ದೀನ್ ರಸ್ತೆ ಬಂದರು ಮಂಗಳೂರು ಇಲ್ಲಿಗೆ ತಲುಪಿಸುವಂತೆ ಪ್ರಕಟನೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ (ಮೊ.ಸಂ.:9481344786) ಅಥವಾ ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಆರಿಫ್ ಮಸೂದ್ (ಮೊ.ಸಂ.:9448061122 )ನ್ನು ಸಂಪರ್ಕಿಸುವಂತೆ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಪ್ರಕಟನೆಲ್ಲಿ ತಿಳಿಸಿದ್ದಾರೆ.