ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಸ್ ಟ್ರಸ್ ಬದಲು ರಿಷಿ ಸುನಕ್‍ರನ್ನು ತರಲು ಬಂಡಾಯ ನಾಯಕರಿಂದ ಪ್ರಯತ್ನ: ವರದಿ

Update: 2022-10-15 03:10 GMT
ರಿಷಿ ಸುನಕ್

ಲಂಡನ್: ಬ್ರಿಟನ್ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಮುಖ್ಯಸ್ಥರು ಮತ್ತು ಪ್ರಧಾನಿ ಹುದ್ದೆಗೆ ಲಿಸ್ ಟ್ರಸ್ ಅವರ ಬದಲಾಗಿ ಅವರ ಪ್ರತಿಸ್ಪರ್ಧಿ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ತರುವ ಪ್ರಯತ್ನ ಪಕ್ಷದ ಕೆಲ ಬಂಡಾಯ ನಾಯಕರಿಂದ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ hindustantimes.com ವರದಿ ಮಾಡಿದೆ.

ಮಾಜಿ ನಾಯಕತ್ವ ಪ್ರತಿಸ್ಪರ್ಧಿ ಸುನಕ್ ಅವರನ್ನು ಒಳಗೊಂಡ "ಯುನಿಟಿ" ಜಂಟಿ ಟಿಕೆಟ್ ತಂಡ ಈ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ನಾಯಕತ್ವಕ್ಕೆ ನಡೆದ ಚುನಾವಣೆಯಲ್ಲಿ ತಪ್ಪು ನಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ಟೋರಿ ಪಕ್ಷದ ಬೆಂಬಲಿಗರಲ್ಲಿ ಸುಮಾರು ಅರ್ಧದಷ್ಟು ಮಂದಿ 'ದ ಟೈಮ್ಸ್' ನಡೆಸಿದ ಯೂಗೋವ್ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಪಕ್ಷದ ಸದಸ್ಯರು ತಪ್ಪು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಕಳೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಮತ ನೀಡಿದ್ದ ಶೇಕಡ 62ರಷ್ಟು ಮಂದಿ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಸದಸ್ಯರ ಆಯ್ಕೆ ಸರಿ ಎಂದು ಅಭಿಪ್ರಾಯಪಟ್ಟವರ ಪ್ರಮಾಣ ಶೇಕಡ 15ರಷ್ಟು ಮಾತ್ರ ಎನ್ನಲಾಗಿದೆ.

ಇದು ಸಂಸತ್ತಿನ ಟೋರಿ ಸದಸ್ಯರಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗಿದ್ದು, ಈ ಕಾರಣದಿಂದ ಹೆಚ್ಚು ಮತ ಪಡೆದ ಟ್ರುಸ್ ಬದಲಾಗಿ ಪರ್ಯಾಯ ಅಭ್ಯರ್ಥಿಯನ್ನು ಪರಿಶೀಲಿಸಲು ಮುಂದಾಗಿದೆ. ಈ ಪರ್ಯಾಯ ಮುಖಂಡರ ಸಾಲಿನಲ್ಲಿ 42 ವರ್ಷದ ಸುನಕ್ ಮುಂಚೂಣಿಯಲ್ಲಿದ್ದು, ಪ್ರಧಾನಿ ಹುದ್ದೆ ರೇಸ್‍ನಲ್ಲಿ ಮೂರನೇ ಸ್ಥಾನದಲ್ಲಿದ್ದ ಕಮೊನ್ಸ್ ಪೆನ್ನಿ ಮಾರ್ಡಂಟ್ ಅವರ ಹೆಸರೂ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News