×
Ad

ಕೊಳಲಗಿರಿ: ಗೊಬ್ಬುದ ಗಮ್ಮತ್ತು- ಕ್ರೀಡಾ ಸ್ಪರ್ಧೆ

Update: 2022-10-15 19:57 IST

ಉಡುಪಿ, ಅ.15: ಗೊಬ್ಬುದ ಗಮ್ಮತ್ತು ಕಾರ್ಯಕ್ರಮ ಮತ್ತು ಕ್ರಿಕೆಟ್ ಪಂದ್ಯಾ ಕೂಟ ಹಾಗೂ ಕ್ರೀಡಾ ಸ್ಪರ್ಧೆಯನ್ನು ಉಪ್ಪೂರು ಗ್ರಾಮದ ಕೊಳಲಗಿರಿ ಸೈಂಟ್ ಕೋವಿಯರ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಮೈದಾನದ ಮಹಾದ್ವಾರವನ್ನು ಪ್ರಗತಿಪರ ಕೃಷಿಕ ರತ್ನಾಕರ್ ಡಿ.ಶೆಟ್ಟಿ, ಕ್ರೀಡಾಂಗಣವನ್ನು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಮೇಶ್ ಕರ್ಕರ ಮತ್ತು ಗ್ರಾಪಂ ಮಾಜಿ ಸದಸ್ಯ ಎ.ಸದಾನಂದ ನಾಯಕ್ ಉದ್ಘಾಟಿಸಿದರು. ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ  ರಮೇಶ್ ಶೆಟ್ಟಿ ಟ್ರೋಫಿ ಅನಾವರಣಗೊಳಿಸಿದರು. ಗ್ರಾಪಂ ಅಧ್ಯಕ್ಷ ಮಹೇಶ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಸಂಚಾಲಕ ಅಶ್ವಿನ್ ರೋಚ್ ಹಾಗೂ ಸಮಾಜ ಸೇವಕ ಫ್ರಾಂಕಿ ಡಿಸೋಜ ಅವರನ್ನು ಸನ್ಮಾನಿಸಿದರು. ಕೊಳಲಗಿರಿ ಚರ್ಚ್‌ನ ಧರ್ಮಗುರು ರೆ.ಫಾಅನಿಲ್ ಪ್ರಕಾಶ್ ಕ್ಯಾಸ್ತಲಿನೋ, ಗ್ರಾಪಂ ಸದಸ್ಯರಾದ ರಾಜಶ್ರೀ ಮಸ್ಕರೇನಸ್, ಪ್ರಶಾಂತ್ ಮಾಯಾಡಿ, ಧರಣೇಶ್ ಲಕ್ಷ್ಮೀನಗರ, ಹಾಗೂ ಬಾಲಕೃಷ್ಣ ಶೆಟ್ಟಿ ನರ್ನಾಡು, ಪ್ರಶಾಂತ್ ಶೆಟ್ಟಿ ಅಮ್ಮುಂಜೆ, ಸಮಾಜ ಸೇವಕಿ ರೇಖಾ ಮರಾಠೆ, ಅಂತಾರಾಷ್ಟ್ರೀಯ ಸ್ಯಾಕ್ಸೋಫೋನ್ ಕಲಾವಿದ ಪಾಂಡುರಂಗ ಪಡ್ಡಂ, ಗ್ರಾಪಂ ಮಾಜಿ ಸದಸ್ಯರಾದ ಗಣೇಶ್ ಡಿ.ಪೂಜಾರಿ ಉಪಸ್ಥಿತರಿದ್ದರು.

ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ರೋಯಲ್ ಕೊಳಲಗಿರಿ ತಂಡವು ಪ್ರಥಮ ಹಾಗೂ ಅಮ್ಮುಂಜೆ ವಾರಿಯರ್ಸ್‌ ತಂಡವು ದ್ವಿತೀಯ ಟ್ರೋಫಿ ಪಡೆಯಿತು. ದಿನೇಶ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ದೇವಾಡಿಗ ವಂದಿಸಿದರು. ಅವಿನಾಶ್ ಮತ್ತು ಶಾಂತಾ ಸೆಲ್ವರಾಜ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News