ರಾ.ಹೆ. ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ
ಪಡುಬಿದ್ರಿ : ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿ ರುವ ನವಯುಗ್ ಟೋಲ್ ಪ್ಲಾಝಾ ವತಿಯಿಂದ ಈ ಹಿಂದೆ ನೀಡಿದ ಹಲವು ಭರವಸೆಗಳನ್ನು ಈಡೇರಿಸದ ಕಾರಣ ಹೆಜಮಾಡಿ ಗ್ರಾಮಸ್ಥರು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸಂಬಂಧಿತ ಇಲಾಖೆಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಶನಿವಾರ ರಾತ್ರಿ ಹೆಜಮಾಡಿ ಶ್ರೀನಾರಾಯಣ ಗುರು ಸಭಾಭವನದಲ್ಲಿ ಹೆಜಮಾಡಿ ಗ್ರಾಪಂ ಅಧ್ಯಕ್ಷ ಪಾಂಡುರಂಗ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮವ್ಯಾಪ್ತಿಯಲ್ಲಿ ಅಪೂರ್ಣಗೊಂಡ ಹೆದ್ದಾರಿ ಕಾಮಗಾರಿಗಳು, ಟೋಲ್‌ಗೇಟ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಪಡೆಯಲಾಯಿತು.
ಪಡುಬಿದ್ರಿ ಕಡೆಯಿಂದ ಹೆಜಮಾಡಿ ಒಳ ರಸ್ತೆಗೆ ಆಗಮಿಸುವಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ಟೋಲ್‌ಗೇಟ್ ಸಮೀಪದ ಶಿವನಗರ ಕ್ರಾಸ್‌ನಲ್ಲಿ ಸ್ಕೈವಾಕ್ ನಿರ್ಮಾಣ, ಹೆದ್ದಾರಿ ಬದಿ ಚರಂಡಿ ನಿರ್ಮಾಣ, ದಾರಿದೀಪ ಅಳವಡಿಕೆ, ಹೆಜಮಾಡಿ ಒಳ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ತೆರವುಗೊಳಿ ಸುವ ಬಗ್ಗೆ ನಿರ್ಣಯಿಸಿ ಸರಕಾರ, ಹೆದ್ದಾರಿ ಇಲಾಖೆ, ಜಿಲ್ಲಾಡಳಿತ, ನವಯುಗ್ ಟೋಲ್ ಪ್ಲಾಝಾ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಶೇಖಬ್ಬ ಕೋಟೆ, ರೋಲ್ಫಿ ಡಿಕೋಸ್ತ, ಸುಧಾಕರ ಕರ್ಕೇರ, ತೇಜಪಾಲ್ ಸುವರ್ಣ, ಸುಭಾಷ್ ಸಾಲ್ಯಾನ್, ಅಬ್ದುಲ್ ಅಜೀಜ್, ಸುಧೀರ್ ಕರ್ಕೇರ, ಭಾಸ್ಕರ ಪುತ್ರನ್, ವಿಶಾಲಾಕ್ಷಿ ಪುತ್ರನ್, ಶಿವಕುಮಾರ್, ರೇಷ್ಮಾ ಮೆಂಡನ್, ಸುಗುಣ, ನಿರ್ಮಲಾ, ಫರೀದಾ ಬೇಗಂ, ದೊಂಬ ಪೂಜಾರಿ, ಸನಾ ಇಬ್ರಾಹಿಮ್, ನಿತಿನ್ ಕೋಡಿ, ವಾಸುದೇವ ಗಡಿಯಾರ್, ಶ್ರೀನಿವಾಸ ಹೆಜಮಾಡಿ, ಶಿವರಾಮ ಶೆಟ್ಟಿ, ಸಂಜೀವ ಟಿ., ರಘುವೀರ್, ಸೂಫಿ ಮೊದಲಾದವರು ಉಪಸ್ಥಿತರಿದ್ದರು.
ಹೋರಾಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ನೂತನ ಸಮಿತಿಯನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.