×
Ad

ಸುರತ್ಕಲ್ ಟೋಲ್ ಹೋರಾಟದಲ್ಲಿ ಭಾಗವಹಿಸುವಂತೆ ಕರೆ

Update: 2022-10-17 19:27 IST

ಉಡುಪಿ, ಅ.17: ಸುರತ್ಕಲ್ ಟೋಲ್ ವಿರುದ್ಧ ಸಾಕಷ್ಟು ಬಾರಿ ಹೋರಾಟ ನಡೆಸಿ ಸರಕಾರವನ್ನು ಎಚ್ಚರಿಸಿದರೂ ಸುಳ್ಳಿನ ಮೇಲೆ ಸುಳ್ಳಿನ ಭರವಸೆ ನೀಡಿ ಜನರನ್ನು ವಂಚಿಸುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಅ.18ರಂದು ನಡೆಯುವ ಟೋಲ್ ತೆರವು ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಬಾಹಿರವಾಗಿ ಎಲ್ಲಾ ಟೋಲ್ ಗೇಟ್‌ಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಅವಧಿ ಮುಗಿದು 4 ತಿಂಗಳು ಕಳೆದರೂ, ಸುರತ್ಕಲ್ ಟೋಲ್‌ನಲ್ಲಿ ಕಾನೂನು ಬಾಹಿರ ವಾಗಿ ವಾಹನ ಸವಾರರಿಂದ ಟೋಲ್ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಾಗೂ ಶಾಸಕರು, ಸಂಸತ್ ಸದಸ್ಯರು ಹಾಗೂ ಈ ಜಿಲ್ಲೆಗಳ ಮೂವರು ಮಂತ್ರಿಗಳು ಹೇಳಿಕೆ ನೀಡುವುದಕ್ಕೆ ಮಾತ್ರ ಸೀಮಿತ ರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News