ಅಪಘಾತದ ಗಾಯಾಳು ವಿದ್ಯಾರ್ಥಿನಿ ಮೃತ್ಯು
Update: 2022-10-17 20:41 IST
ಮಣಿಪಾಲ, ಅ.17: ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಮಣಿಪಾಲ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಅ.16ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಮಹಾರಾಷ್ಟ್ರದ ಶಬ್ಬೀರ್ ಹುಸೈನ್ ಎಂಬವರ ಮಗಳು, ಮಣಿಪಾಲ ಸ್ಕೂಲ್ ಆಫ್ ಲೈಸಪ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಝಹರಾ ಶಬ್ಬೀರ್ ಹುಸೈನ್ (24) ಎಂದು ಗುರುತಿಸಲಾಗಿದೆ.
ಸೆ.24ರಂದು ಮಣಿಪಾಲ ಎಂಐಟಿ ರಸ್ತೆಯಲ್ಲಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಇವರು, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದರು. ಬಳಿಕ ಕಾಲೇಜಿನ ಪರೀಕ್ಷೆ ಬರೆದು ಸಂಪೂರ್ಣ ಚೇತರಿಸಿಕೊಂಡಿದ್ದ ಇವರು, ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಅಸ್ವಸ್ಥಗೊಂಡು ಮೃತಪಟ್ಟರೆಂದು ತಿಳಿದು ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.