ಉತ್ತರ ಪ್ರದೇಶದಲ್ಲಿ 18 ವರ್ಷದ ಯುವತಿಯ ಮೇಲೆ ಆಟೋರಿಕ್ಷಾದಲ್ಲಿ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು
ಲಕ್ನೋ: ಅಕ್ಟೋಬರ್ 15 ರಂದು ಲಕ್ನೋದಲ್ಲಿ 18 ವರ್ಷದ ಯುವತಿಯನ್ನು ಇಬ್ಬರು ವ್ಯಕ್ತಿಗಳು ಆಟೋರಿಕ್ಷಾ(Autorickshaw)ದೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಉತ್ತರ ಪ್ರದೇಶ ಪೊಲೀಸರು ರವಿವಾರ ಪ್ರಕರಣ ದಾಖಲಿಸಿದ್ದಾರೆ ಎಂದು Indianexpress.com ವರದಿ ಮಾಡಿದೆ.
ಶನಿವಾರ ಸಂಜೆ ಯುವತಿ ತನ್ನ ಟ್ಯೂಷನ್ ತರಗತಿ ಮುಗಿಸಿ ಮನೆಗೆ ಆಟೋ ರಿಕ್ಷಾದ ಮೂಲಕ ತೆರಳುತ್ತಿದ್ದ ವೇಳೆ ಈ ಪ್ರಕರಣ ನಡೆದಿದೆ ಎಂದು ndtv.com ವರದಿ ಮಾಡಿದೆ. ಬಾಲಕಿ ವಾಹನವನ್ನು ಹತ್ತಿದ ವೇಳೆ ಪುರುಷ ಪ್ರಯಾಣಿಕರೊಬ್ಬರು ವಾಹನದಲ್ಲಿದ್ದರು ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ತನ್ನ ದೂರಿನಲ್ಲಿ ಆಟೋ-ರಿಕ್ಷಾ ಚಾಲಕ ಮತ್ತು ಆತನೊಂದಿಗಿದ್ದ ವ್ಯಕ್ತಿ ತನ್ನನ್ನು ಏಕಾಂತ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ(Times of India) ವರದಿ ಮಾಡಿದೆ. ಇಬ್ಬರು ವ್ಯಕ್ತಿಗಳು ಆಕೆಯ ತಲೆಗೆ ಹೊಡೆದಿದ್ದಾರೆ ಮತ್ತು ಪೊಲೀಸ್ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಘಟನೆಯ ವಿರುದ್ಧ ಬಾಲಕಿಯ ಮನೆಯವರು ರವಿವಾರ ದೂರು ದಾಖಲಿಸಿದ್ದಾರೆ.
"ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ" ಎಂದು ಅಪರಿಚಿತ ಪೊಲೀಸ್ ಅಧಿಕಾರಿಯೊಬ್ಬರು indianexpressಗೆ ತಿಳಿಸಿದ್ದಾರೆ. ದೂರುದಾರರ ಹೇಳಿಕೆಯನ್ನು ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಪತ್ರಿಕೆ ವರದಿ ಮಾಡಿದೆ.
ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.