ಸ್ವೀಡನ್: ಉಲ್ಫ್ ಕ್ರಿಸ್ಟರ್ಸನ್ ನೂತನ ಪ್ರಧಾನಿ
Update: 2022-10-17 23:08 IST
ಸ್ಟಾಕ್ಹೋಂ, ಅ.17: ಸ್ವೀಡನ್ ನ ನೂತನ ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿ ಕನ್ಸರ್ವೇಟಿವ್ ಪಕ್ಷದ ಮುಖಂಡ ಉಲ್ಫ್ ಕ್ರಿಸ್ಟರ್ಸನ್ರ(Ulf Christerson)ನ್ನು ಆಯ್ಕೆ ಮಾಡಲಾಗಿದೆ.
ನೂತನ ಪ್ರಧಾನಿಯಾಗಿ ಕ್ರಿಸ್ಟನ್ರನ್ನು ಸಂಸತ್ತು 176-173 ಮತಗಳ ಅಂತರದಿಂದ ಆಯ್ಕೆ ಮಾಡಿದೆ. ಅವರ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ , ಈ ಹಿಂದೆ ತೀವ್ರವಾದಿ ಬಲಪಂಥೀಯ ಪಕ್ಷವಾಗಿ ಗುರುತಿಸಿಕೊಂಡಿರುವ ಸ್ವೀಡನ್ ಡೆಮೊಕ್ರಾಟ್ ಪಕ್ಷ ಬೆಂಬಲ ಘೋಷಿಸಿದೆ. ನೂತನ ಸರಕಾರದ ಸಚಿವ ಸಂಪುಟ ಮಂಗಳವಾರ ರಚನೆಯಾಗುವ ನಿರೀಕ್ಷೆಯಿದೆ. ಕ್ರಿಸ್ಟರ್ಸ್ಸನ್ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ. ಆದರೆ ಸ್ವೀಡನ್ನ ಕಾನೂನಿನ ಪ್ರಕಾರ, ತನ್ನ ವಿರುದ್ಧ ಬಹುಮತ ಇಲ್ಲದಿದ್ದರೆ ಪ್ರಧಾನಿ ಸರಕಾರದ ನೇತೃತ್ವ ವಹಿಸಿ ಆಡಳಿತ ನಡೆಸಬಹುದು.