17ರ ವಯೋಮಿತಿಯ ಫಿಫಾ ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಸೋಲು

Update: 2022-10-18 02:21 GMT
(PTI photo)

ಭುವನೇಶ್ವರ: ಫಿಫಾ 17ರ ವಯೋಮಿತಿ ಮಹಿಳೆಯರ ವಿಶ್ವಕಪ್ ಫುಟ್ಬಾಲ್ ಟೂರ್ನಿ (FIFA Women's Under-17 World Cup campaign) ಯಲ್ಲಿ ಭಾರತ ತಂಡ ಎಲ್ಲ ಪಂದ್ಯಗಳಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ.

ಸೋಮವಾರ ನಡೆದ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ರಬಲ ಬ್ರೆಝಿಲ್ ವಿರುದ್ಧ 0-5 ಗೋಲುಗಳ ಸೋಲು ಅನುಭವಿಸಿದೆ. ಇಡೀ ಟೂರ್ನಿಯಲ್ಲಿ ಭಾರತ ತಂಡ ಒಂದೂ ಗೋಲು ಗಳಿಸಲು ಸಾಧ್ಯವಾಗಿಲ್ಲ.

ಇದೇ ಮೊದಲ ಬಾರಿಗೆ ಈ ವಯೋಮಿತಿಯ ವಿಶ್ವಕಪ್‍ನಲ್ಲಿ ಭಾಗವಹಿಸುತ್ತಿರುವ ಭಾರತ ತಂಡ ಅತಿಥೇಯ ತಂಡ ಎಂಬ ನೆಲೆಯಲ್ಲಿ ಪ್ರವೇಶ ಪಡೆದಿತ್ತು. ಗ್ರೂಪ್ ಎ ಪಂದ್ಯಗಳಲ್ಲಿ ಭಾರತ ತಂಡ ಅಮೆರಿಕ ವಿರುದ್ಧ 0-8, ಮೊರಾಕ್ಕೊ ವಿರುದ್ಧ 0-3 ಅಂತರದ ಸೋಲು ಅನುಭವಿಸಿತ್ತು. ಮೂರು ಪಂದ್ಯಗಳಲ್ಲಿ ಎದುರಾಳಿಗಳಿಗೆ 16 ಗೋಲುಗಳನ್ನು ಬಿಟ್ಟುಕೊಟ್ಟು, ಯಾವ ಗೋಲೂ ಗಳಿಸದೆ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯಿತು.

ಬ್ರೆಝಿಲ್ ಹಾಗೂ ಅಮೆರಿಕ ತಲಾ ಎರಡು ಗೆಲುವು ಹಾಗೂ ಒಂದು ಡ್ರಾದೊಂದಿಗೆ ಏಳು ಅಂಕ ಪಡೆದು ಕ್ವಾರ್ಟರ್ ಫೈನಲ್‍ಗೆ ತೇರ್ಗಡೆಯಾಗಿವೆ.

ಮರ್ಮಗೋವಾದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಅಮೆರಿಕ, ಮೊರಾಕ್ಕೊ ವಿರುದ್ಧ 4-0 ಗೋಲುಗಳ ಜಯ ಗಳಿಸಿತು. ಅಕ್ಟೋಬರ್ 14ರಂದು ನಡೆದ ಬ್ರೆಝಿಲ್ ಹಾಗೂ ಅಮೆರಿಕ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಈ ಬಗ್ಗೆ timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News