×
Ad

ಕಾಪು: ಅಸ್ಮಾವುಲ್ ಹುಸ್ನಾ -ಬುರ್ದಾ ಮಜ್ಲಿಸ್ ಕಾರ್ಯಕ್ರಮ

Update: 2022-10-18 19:32 IST

ಕಾಪು, ಅ.18: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿ ಯೇಶನ್ ಇದರ 33ನೆ ವಾರ್ಷಿಕೋತ್ಸವದ ಪ್ರಯುಕ್ತ ವಾರ್ಷಿಕ ಅಸ್ಮಾವುಲ್ ಹುಸ್ನಾ ಹಾಗೂ ಬುರ್ದಾ ಮಜ್ಲಿಸ್ ರವಿವಾರ ಪೊಲಿಪು ಮಸೀದಿ ಆವರಣ ದಲ್ಲಿರುವ ಶಂಶುದ್ದೀನ್ ವಲಿಯುಲ್ಲಾ ವೇದಿಕೆಯಲ್ಲಿ ಜರಗಿತು.

ಸಯ್ಯದ್ ಶಂಶುದ್ದೀನ್ ವಲಿಯುಲ್ಲಾರ ಕೂಟು ಝಿಯಾರತ್ ಹಾಗೂ  ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಂದ್ರ ನಗರ ಮಸೀದಿಯ ಖತೀಬ್ ಮುಸ್ತಫಾ ಸಖಾಪಿ ಅಸ್ಮಾವುಲ್ ಹುಸ್ನಾ ನಡೆಸಿ ಕೊಟ್ಟರು. ಏರ್ವಾಡಿ ಶಹೀದ್ ಶುಹದಾ ಎಂದೇ ಖ್ಯಾತರಾದ ಅಬೂ ತ್ವಾಹಿರ್ ಉಸ್ತಾದ್(ತಮಿಳುನಾಡು) ಇವರು ಬುರ್ದಾ ಆಲಾಪನೆ ಮಾಡಿದರು.

ಈ ಸಂದರ್ಭದಲ್ಲಿ ಕಾಪು ಖಾಝಿ ಪಿ.ಬಿ.ಅಹ್ಮದ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು. ಖುವ್ವತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿ ಯೇಶನ್ ಅಧ್ಯಕ್ಷ ಮುಹಮ್ಮದ್ ಆರೀಫ್ ಕಲ್ಯಾ, ಉಪಾಧ್ಯಕ್ಷ ಶಾಹೀದ್, ಪ್ರಧಾನ ಕಾರ್ಯದರ್ಶಿ ನಿಹಾಲ್, ಜೊತೆ ಕಾರ್ಯದರ್ಶಿ ಸುಲೆಮಾನ್ ಮೆಹ ಶೂಕ್, ರಿಯಾಝ್, ಖಜಾಂಚಿ ಜಲೀಲ್ ಹಾಗೂ ಪೊಲಿಪು ಮಸೀದಿಯ ಅಧ್ಯಕ್ಷ ಅಬ್ದುಲ್ಲಾ, ಮಸೀದಿ ಖತೀಬ್ ಇರ್ಷಾದ್ ಸಅದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News