×
Ad

‘ಏಕ್ ದಿನ್ ಎನ್‌ಸಿಸಿ ಆರ್ಮಿ ಕೆ ನಾಮ್’ ಕಾರ್ಯಕ್ರಮ

Update: 2022-10-18 19:34 IST

ಉಡುಪಿ, ಅ.18: ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ಏಕ್ ದಿನ್ ಎನ್.ಸಿ.ಸಿ. ಆರ್ಮಿ ಕೆ ನಾಮ್’ ಎಂಬ ಕಾರ್ಯ ಕ್ರಮ ಇತ್ತೀಚೆಗೆ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜರಗಿತು.

ಮಣಿಪಾಲ ಮಾಹೆಯ ಎಂಐಟಿ ಕಾಲೇಜಿನ ಲೈಪ್ಟಿನ್‌ಂಟ್ ಕಮಾಂಡರ್ ಗೀತಾಲಕ್ಷ್ಮೀ ಪಿ.ಎಂ. ಮಾತನಾಡಿ, ಎನ್‌ಸಿಸಿಯು ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನವನ್ನು ನಡೆಸಲು, ನಾಯಕತ್ವವನ್ನು ಬೆಳೆಸಲು ಹಾಗೂ ಪ್ರತಿಭೆ ಯನ್ನು ಪ್ರದರ್ಶಿಸಲು ಇರುವ ಒಂದು ಅತ್ಯುತ್ತಮ ವೇದಿಕೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್‌ಸಿಸಿ ಆರ್ಮಿವಿಂಗ್ ಅಧಿಕಾರಿ ಲೈಪ್ಟಿನೆಂಟ್ ನವ್ಯ, 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಸುಬೇದಾರ್ ಪ್ರಕಾಶ್ಚಂದ್ರ ಹಾಗೂ ಹವಾಲ್ದಾರ್ ಭೀಮಾಲ್, ಎನ್‌ಸಿಸಿ ಹಾಲಿ, ಮಾಜಿ ಕೆಡೆಟ್‌ಗಳು, ಕೆಡೆಟ್‌ಗಳು ಪೋಷಕರು, ಉಪನ್ಯಾಸಕರು ಉಪಸ್ಥಿತರಿದ್ದರು. ಕೆಡೆಟ್ ಎಸ್ಯುಒ ಸಾಕ್ಷೀ ಎಲ್. ಕರ್ಕೇರ ಸ್ವಾಗತಿಸಿದರು. ಸಾರ್ಜೆಂಟ್ ರೆನಿಟಾ ವಂದಿಸಿದರು. ಕೆಡೆಟ್ ದೀಪಾಲಿ ಭಟ್ ಹಾಗೂ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News