×
Ad

ಅ.21ಕ್ಕೆ ಉಡುಪಿ ಜಿಲ್ಲಾಧಿಕಾರಿಯೊಂದಿಗೆ ವಕೀಲರ ಸಂವಾದ

Update: 2022-10-18 21:15 IST
ಜಿಲ್ಲಾಧಿಕಾರಿ  ಕೂರ್ಮಾರಾವ್

ಉಡುಪಿ, ಅ.18: ಉಡುಪಿ ವಕೀಲರ ಸಂಘ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಂಟಿ ಆಶ್ರಯದಲ್ಲಿ ಅ.21ರಂದು ಸಂಜೆ 4 ಗಂಟೆಗೆ ಕಂದಾಯ ವಿಷಯಗಳ ಕೇಸಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ  ಕೂರ್ಮಾರಾವ್ ರೊಂದಿಗೆ ವಕೀಲರ ಸಂಘದ ಆವರಣದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ಉದ್ಘಾಟಿಸಲಿ ದ್ದಾರೆ. ಇದರಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಉಡುಪಿ, ಕಾಪು ಮತ್ತು ಬ್ರಹ್ಮಾವರಗಳ ತಹಶೀಲ್ದಾರರು ಸಹ ಭಾಗವಹಿಸಲಿದ್ದಾರೆ. 

ಸಂವಾದದಲ್ಲಿ ಕಂದಾಯಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ಸವಾಲು-ಜವಾಬು ಗಳ ವೇಳೆ ತಮಗೆ ಎದುರಾಗುವ ಪ್ರಶ್ನೆಗಳು, ಸಂಶಯಗಳ ಕುರಿತಂತೆ ಕಂದಾಯ ಅಧಿಕಾರಿಗಳೊಂದಿಗೆ ಸ್ಪಷ್ಟೀಕರಣವನ್ನು ಕೇಳಬಹುದಾಗಿದೆ. ತಮ್ಮ ಪ್ರಶ್ನೆಗಳನ್ನು ಅ.19ರೊಳಗೆ ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್‌ ಕುಮಾರ್ ಅವರಿಗೆ ಕಳುಹಿಸಿಕೊಡಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News